ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆ

0

ಬಡಗನ್ನೂರುಃ ಜೆ.ಜೆ.ಎಮ್ ನಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ವಿಚಾರದಲ್ಲಿ ಸದಸ್ಯರೊಳಗೆ ಮಾತಿನ ಚಕಮಕಿ ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕನ್ನಡ್ಕ ರವರ ಅಧ್ಯಕ್ಷತೆಯಲ್ಲಿ ಜು 31 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.  ಜೆ.ಜೆ.ಎಮ್ ನಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸು ಸಂದರ್ಭದಲ್ಲಿ ಜೆ.ಜೆ.ಎಮ್ ಇಂಜಿನಿಯರ್ ಗ್ರಾ.ಪಂ ಸದಸ್ಯರೊಂದಿಗೆ ಸಭೆ ನಡೆಸಿದೆ ಇರುದು ಏಕೆ?  ಸುಳ್ಯಪದವು ಭಾಗದಲ್ಲಿ ಟ್ಯಾಂಕ್ ನಿರ್ಮಾಣ ಮಾಡಲು ಯಾರು ಹೇಳಿದ್ದು , ನಮ್ಮಗೆ  ತಿಳಿಸಿಲ್ಲ ಯಾಕೆ ಎಂದು ಸಭೆಯನ್ನು ಪ್ರಶ್ನಿಸಿದರು. ಈ ಬಗ್ಗೆ ಪಿಡಿಒ ವಸೀಮ ಗಂಧದ ಉತ್ತರಿಸಿ ಒಂದು ವಾರ ಮೊದಲು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ತಂದಿದ್ದೇನೆ.  ಜೆ.ಜೆ.ಎಮ್  ಜಿ.ಪಂ ಜವಾಬ್ದಾರಿ ಅವರು ತಿಳಿಸಬೇಕು. ನಮಗೆ ಅವರು ಬರುವ ದಿನ ಬೆಳಗ್ಗೆ ಹೇಳುತ್ತಾರೆ. ತಕ್ಷಣ ಯಾರಿಗೆಲ್ಲ ಹೇಳಕ್ಕೆ ಸಾಧ್ಯ ವಿಷಯ ತಿಳಿದಿದ್ದುದರೂ ಸುಮ್ಮನೆ ಇಲ್ಲದ ವಿಷಯದ ಬಗ್ಗೆ  ಚರ್ಚ್ ಮಾಡಿ ಯಾಕೆ ಸಮಯ ಕಳೆಯತ್ತೀರಾ ಇದು ಸರಿಯಲ್ಲ ಎಂದರು.

 

 ಒಂದೇ ಭಾಗದಲ್ಲಿ ಎರಡು ಎರಡು ನಿರ್ಮಾಣ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ವೆಂಕಟೇಶ್ ಕನ್ನಡ್ಕ  ಸುಳ್ಯಪದವು ಭಾಗದಲ್ಲಿ ಪ್ರಸ್ತುತ ಒಂದು ಟ್ಯಾಂಕ್ ಇದೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸಮಸ್ಯೆ ಇರುವ ಭಾಗದಲ್ಲಿ ಟ್ಯಾಂಕ್ ನಿರ್ಮಾಣ ಆಗಬೇಕು ಎಂದ ಅವರು ಈಗ ಟ್ಯಾಂಕ್ ರಚನೆಗೆ ಗುರುತಿಸಿದ ಜಾಗವನ್ನು ಬದಲಾವಣೆ ಮಾಡಿ ಕನ್ನಡ್ಕ ಭಾಗದಲ್ಲಿ ಮಾಡಬೇಕು.ಪಟ್ಟುಹಿಡಿದರು.ಉಪಾಧ್ಯಕ್ಷ ಸಂತೋಷ್ ಆಳ್ವ ಪ್ರತಿಕ್ರಿಯಿಸಿ, ಬಡಗನ್ನೂರು ಗ್ರಾಮದಲ್ಲಿ ಜೆಜೆಎಮ್ ಕುಡಿಯುವ ನೀರಿನ ಟ್ಯಾಂಕ್ ನಿಗದಿತ ಸ್ಥಳ ಸರಿಯಾಗಿದೆ.ಎಂದರು  ಕನ್ನಡ್ಕ ಪ್ರದೇಶದಲ್ಲಿ ಟ್ಯಾಂಕ್ ರಚನೆಯಾದರೆ  ಸಾಧಾರಣವಾಗಿ ಎಲ್ಲಾ ಭಾಗದ ಸಮಸ್ಯೆ ಬಗೆಹರಿಯುತ್ತದೆ. ಎಂದು ಸದಸ್ಯ ವೆಂಕಟೇಶ್ ಸಭೆಯ ಗಮನಕ್ಕೆ ತಂದರು.

 

 ಈ ಬಗ್ಗೆ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಪ್ರತಿಕ್ರಿಯಿಸಿ, ಜೆ.ಜೆ ಎಮ್ ಇಂಜಿನಿಯರ್ ಜಾಗ ಪರಿಶೀಲನೆ ಮಾಡಿ ಒಪ್ಪಿಗೆ ಕೊಟ್ಟರೆ ಮಾತ್ರ ಬದಲಾವಣೆ ಇಲ್ಲದೆ ಇದ್ದಲ್ಲಿ ಈ ಮೊದಲು ಗುರುತಸಿದ ಜಾಗದಲ್ಲಿ ಟ್ಯಾಂಕ್ ನಿರ್ಮಾಣ ಮಾಡಲಾವುದು ಎಂದು ಹೇಳಿ ಚರ್ಚೆಗೆ ವಿರಾಮ ಹಾಕಿದರು.

 

ಜಿಲ್ಲಾಧಿಕಾರಿ ಗ್ರಾಮವಾಸವ್ಯ ಸಂದರ್ಭದಲ್ಲಿ ವಿಕಲ ಚೇತನ ಮಹಮ್ಮದ್ ಕುಂಞಿ ಪದಡ್ಕ ಇವರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ತಕ್ಷಣ ನೀರಿನ ಸಮಸ್ಯೆ ಬಗೆಹರಿಸುವಂತೆ ಇಂಜಿನಿಯರ್‌ ರವರಿಗೆ ಅದೇಶ ನೀಡಿದ್ದಾರೆ ಅದರೆ ಈತನ ಸಮಸ್ಯೆ ಬಗೆಹರಿಲಿಲ್ಲ ಸಮಸ್ಯೆಗೆ ಸ್ಪಂದನೆ ಇಲ್ಲಂದರೆ ಪುನಃ ಡಿ.ಸಿ ರವರಿಗೆ ಪತ್ರ ಬರೆಯುವ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ  ಸದಸ್ಯ ರವಿರಾಜ ರೈ ಸಜಂಕಾಡಿ    ಸಭೆಯನ್ನು ಒತ್ತಾಯಿಸಿದರು ಈ ಬಗ್ಗೆ ಜೆಜೆ ಎಮ್ ಇಂಜಿನಿಯರ್ ರವರಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಉತ್ತರಿಸಿದರು.

 

ಪುತ್ತೂರು- ಸುಳ್ಯಪದವು ಭಾಗಕ್ಕೆ ಶಾಲಾ ಮಕ್ಕಳ ಅನುಕೂಲಗೊಸ್ಕರ ಬೆಳಗ್ಗೆ ಗಂ  7ಕ್ಕೆ ಪುತ್ತೂರಿನಿಂದ ಸುಳ್ಯಪದವಿಗೆ  ಹೊರಟು  ಪುನಃ  7.45 ಕ್ಕೆ  ಸುಳ್ಯಪದವಿನಿಂದ ಪುತ್ತೂರಿಗೆ  ಹೊರಡುವ ರೀತಿಯಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡುವಂತೆ ಕೆ.ಎಸ್. ಆರ್. ಟಿ.ಸಿ ವಿಭಾಗಿಯ ನಿಯಂತ್ರಣ ಅಧಿಕಾರಿಗಳಿಗೆ ಬರೆಯಲು ನಿರ್ಣಯ ಮಾಡಲಾಯಿತು.

 

 ಕೌಡಿಚ್ಚಾರ್- ಸುಳ್ಯಪದವು ಸಂಪರ್ಕ ರಸ್ತೆಯ ಪಾಪೆಮಜಲು ಸರ್ಕಾರಿ ಪ್ರೌಢಶಾಲಾ ಮುಖ್ಯ ಧ್ವಾರ್ ಬಳಿ  ಶಾಲಾ ಮಕ್ಕಳು ಅನುಕೂಲಕ್ಕಾಗಿ ಬಸ್ ನಿಲ್ಲಿಸುವಂತೆ ನಾಮಫಲಕ ಅಳವಡಿಸಲಾಗಿದೆ. ಅದರೆ ಬಸ್ ಸುಮಾರು ಅರ್ದ ಕಿಮೀ ದೂರದಲ್ಲಿ ಇನ್ನೊಂದು ಬಸ್ ತಂಗುದಾಣದಲ್ಲಿ ನಿಲ್ಲಿಸುತ್ತಿದ್ದಾರೆ ಇದರಿಂದ ಮಕ್ಕಳಿಗೆ ಕಷ್ಟಕರ ವಾಗುತ್ತಿದೆ.ಒಂದು ವೇಳೆ ಬಸ್ ನಿಲ್ಲಿಸಿದರು ಅವಸರದಲ್ಲಿ ಬಸ್ ಚಲಾಯಿಸುತ್ತಾರೆ ಈಗಾದಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆಯಾದರೆ ಯಾರು ಹೊಣೆ ಎಂದು ಸದಸ್ಯೆ ಜ್ಯೋತಿ ಅಂಬಟೆಮೂಲೆ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಚರ್ಚಿಸಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಬಗ್ಗೆ ನಿರ್ಣಯ ಮಾಡಲಾಯಿತು.

 

ಮೋಡಿಕೆ ಕುಡಿಯುವ ನೀರಿನ ಪಂಪ್ ಸೆಡ್ ಬದಲಾಯಿಸಲು ಮಸ್ಕಾಂ ಗೆ ಬರೆದು ಒಂದು ತಿಂಗಳು ಕಳೆದರು ಮಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕರೆ ಮಾಡಿದಾಗ ಪಂಚಾಯತಿನಿಂದ ಪಾತ್ರ ಬಂದಿಲ್ಲ ಎಂದು ಹೇಳುತ್ತಾರೆ ಎಂದು ಸದಸ್ಯ ಲಿಂಗಪ್ಪ ಮೋಡಿಕೆ ತಿಳಿಸಿದರು. ಈ ಬಗ್ಗೆ ಪಿಡಿಒ ವಸೀಮ ಗಂಧದ  ಮಸ್ಕಾಂ ಇಲಾಖೆಗೆ ರಿಜಿಸ್ಟರ್ ಪೋಸ್ಟ್ ಮಾಡಿದ್ದೇವೆ ಅದರ ರೀಸವುಡ್ ಕಾಫಿ ನಮ್ಮಲ್ಲಿದೆ.ಎಂದ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಕ್ಕೆ ಕಾಯುವುದಲ್ಲ ಸಮಸ್ಯೆ ಬಗೆಹರಸುವುದು ಅವರ ಜವಾಬ್ದಾರಿ ಎಂದು ಗರಂ ಅದರು.

 

ವೇದಿಕೆಯಲ್ಲಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ಪಿಡಿಒ ವಸೀಮ ಗಂಧದ, ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ, ರವಿರಾಜ ರೈ ಸಜಂಕಾಡಿ, ಕುಮಾರ್ ಅಂಬಟೆಮೂಲೆ, ರವಿಚಂದ್ರರ ಸಾರೆಪ್ಪಾಡಿ, ಧರ್ಮೇಂದ್ರ ಪದಡ್ಕ, ವೆಂಕಟೇಶ್ ಕನ್ನಡ್ಕ, ಜ್ಯೋತಿ ಅಂಬಟೆಮೂಲೆ, ಪುಷ್ಪಲತಾ ದೇವಕಜೆ , ಸವಿತಾ ನೇರೊತ್ತಡ್ಕ, ಹೇಮಾವತಿ ಮೋಡಿಕೆ, ದಮಯಂತಿ ನೆಕ್ಕರೆ, ಸುಶೀಲ ಪಕ್ಯೊಡ್ ಮತ್ತು ಸುಜಾತ ಎಂ ಉಪಸ್ಥಿತರಿದ್ದರು. ಗ್ರಾ.ಪಂ ಗುಮಾಸ್ತ ಜಯಪ್ರಸಾದ್ ರೈ ಸ್ವಾಗತಿಸಿ ವಂದಿಸಿದರು .ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸಾರ್ವಜನಿಕ ಅರ್ಜಿ ಹಾಗೂ ಸರಕಾರಿ  ಸುತ್ತೋಲೆ ಓದಿದರು. ಪಂ ಸಿಬ್ಬಂದಿಗಳು ಸಹಕರಿಸಿದರು

LEAVE A REPLY

Please enter your comment!
Please enter your name here