ಮುಂಡೂರು ಮೃತ್ಯುಂಜೇಶ್ವರ ದೇವಸ್ಥಾನದಲ್ಲಿ ಏಕಾಹ ಭಜನೆ, ಶನಿಶ್ವರ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಸೆ.೧೦ರಂದು ನಡೆಯಲಿರುವ ಅರ್ಧ ಏಕಾಹ ಭಜನೆ ಮತ್ತು ಶನಿಶ್ವರ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಶನಿ ಪೂಜಾ ಸಮಿತಿ ಅಧ್ಯಕ್ಷ ಅನಿಲ್ ಕಣ್ಣಾರ್ನೂಜಿ, ಉತ್ಸವ ಸಮಿತಿ ಅಧ್ಯಕ್ಷ ಸುಂದರ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ನಾಯ್ಕ್ ಬಿಡುಗಡೆ ಮಾಡಿದರು. ಕಾರ್ಯಕ್ರಮ ದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಅನಿಲ್ ಕಣ್ಣಾರ್ನೂಜಿ ಮನವಿ ಮಾಡಿದರು. ಸುಮಾರು 2೦೦೦ಕ್ಕಿಂತ ಹೆಚ್ಚು ಶನಿ ಪೂಜಾ ಸೇವೆ ಆಗಬೇಕು ಎಂದು ಗುರಿ ನಿಗದಿ ಮಾಡಿ ಅದಕ್ಕೆ ಬೇಕಾದ ಬೈಲ್ವಾರ್ ಸಮಿತಿ ಮಾಡಿ ಕಾರ್ಯಕರ್ತರನ್ನು ನೇಮಿಸಲಾಯಿತು. 1೦ ತಂಡಗಳನ್ನು ರಚಿಸಿ ಪೂಜಾ ರಶೀದಿ ಮತ್ತು ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಸುಂದರ ಗೌಡರವರು ಸಲಹೆ ನೀಡಿದರು. ಚಂದ್ರ ಶೇಖರ್ ಕುರೆಮಜಲು ಸ್ವಾಗತಿಸಿದರು. ದಿನೇಶ್ ಬಿ.ಕೆ ವಂದಿಸಿದರು. ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಭಕ್ತಾದಿಗಳು, ಸಮಿತಿ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here