ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆ ಸಂಸ್ಕಾರ ಭಾರತಿಯಿಂದ ದೇಶಭಕ್ತಿ ಸಮೂಹಗಾನ ಸ್ಪರ್ಧೆಗೆ ಅವಕಾಶ

0

ಪುತ್ತೂರು:ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಘಟಕದ ವತಿಯಿಂದ ಶಾಲಾ ಮಕ್ಕಳಿಗೆ ದೇಶಭಕ್ತಿ ಸಮೂಹ ಗಾನ ಸ್ಪರ್ಧೆಯನ್ನು ಆ.7ರಂದು ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಗುವುದು. ವಿದ್ಯಾರ್ಥಿಗಳ ವಯಸ್ಸಿಗೆ ತಕ್ಕಂತೆ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿದೆ.ಶಾಲಾ ಸಮವಸ್ತ್ರದಲ್ಲೇ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಸಬೇಕು,ಸ್ಪರ್ಧೆಯಲ್ಲಿ ಭಾಗವಹಿಸುವವರು ಆ.3ರ ಒಳಗಾಗಿ ನೋಂದಾವಣೆ ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಘಟಕರಾದ ವಿದುಷಿ ಪ್ರೀತಿಕಲಾ (ಮೊ: 9964001039),ಪದ್ಮ ಆಚಾರ್ (ಮೊ: 9482745402) ಅಥವಾ ಶಂಕರಿ ಶರ್ಮ (ಮೊ:9449856033)ಅವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here