ವಿವೇಕಾನಂದ ಪ.ಪೂ. ಕಾಲೇಜಿನ ರಕ್ಷಕ- ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ2022-23ನೇ ಸಾಲಿನ ಶಿಕ್ಷಕ- ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಹರಿಕಿರಣ್ ಕೆ. ಆಯ್ಕೆಯಾಗಿದ್ದಾರೆ. ರಕ್ಷಕ-ಶಿಕ್ಷಕ ಸಂಘದ ರಚನೆ ಕಾಲೇಜಿನ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು. ಸಂಘ ಸಭೆಯಲ್ಲಿ ಆಯ್ಕೆ ಪ್ರಕಿಯೆ ನೆರವೇರಿತು. ಉಪಾಧ್ಯಕ್ಷರಾಗಿ ಸಂದರ್ಶಕ ಪ್ರಾಧ್ಯಾಪಕ ಜಯನಂದ ಪೆರಾಜೆ ಮತ್ತು ಸುಳ್ಯದ ಕೊಡಿಬೈಲಿನ ಅಶ್ವಿನಿ ಎಂ.ಜಿ. ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮತ್ತು ಜೊತೆ ಕಾರ್ಯದರ್ಶಿಯಾಗಿ ಕನ್ಯಾನದ ಗುರು ಎಜುಕೇಷನ್ ಟ್ರಸ್ಟ್ ಶ್ರೀಸರಸ್ವತಿ ವಿದ್ಯಾಲಯದ ಅಧ್ಯಕ್ಷ ಈಶ್ವರ ಪ್ರಸಾದ್ ಯು.ಎಸ್. ಹಾಗೂ ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಕುಸುಮ ನೇಮಕಗೊಂಡರು. ಕೋಶಾಧಿಕಾರಿಯಾಗಿ ಕಾಸರಗೋಡಿನ ಉಕ್ಕಿನಡ್ಕದ ಕೃಷ್ಣಪ್ರಕಾಶ್ ಬಳ್ಳಂಬೆಟ್ಟು ಆಯ್ಕೆಯಾದರು. ಸುಮಾರು 25 ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ರಕ್ಷಕ- ಶಿಕ್ಷಕ ಸಂಘದ ನೂತನ ಅಧ್ಯಕ್ಷ ಹರಿಕಿರಣ್ ಕೆ. ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಪೋಷಕರು ಹಾಗೂ ಶಿಕ್ಷಕರು ಸ್ಪಂದಿಸಲು ರಕ್ಷಕ-ಶಿಕ್ಷಕ ಸಂಘವು ಸದಾ ಕಾರ್ಯೋಮ್ಮುಖವಾಗಿರುತ್ತದೆ. ಕಾಲೇಜಿನಅಭಿವೃದ್ಧಿಗೆ ರಕ್ಷಕ-ಶಿಕ್ಷಕ ಸಂಘವು ಇನ್ನಷ್ಟು ಬಲ ತುಂಬುವ ಪ್ರಯತ್ನವನ್ನು ಮಾಡುತ್ತದೆ ಎಂದು ಎಲ್ಲರ ಸಹಕಾರವನ್ನು ಕೋರಿದರು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ. ಗೋಪಾಲಕೃಷ್ಣ ಭಟ್ ಮಾತನಾಡಿ ವಿದ್ಯಾರ್ಥಿ, ಪಾಲಕ, ಶಿಕ್ಷಕ, ಆಡಳಿತ ಮಂಡಳಿ ಮತ್ತು ಸಮಾಜ ಈ ನಾಲ್ಕು ವಿಭಾಗಗಳಿಂದ ಸಮಾನ ರೀತಿಯ ಆಸಕ್ತಿ ಮತ್ತು ಪ್ರೋತ್ಸಾಹ ಸಿಕ್ಕಿದಾಗ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಕಾಲೇಜಿನ ಆಡಳಿತ ಮಂಡಳಿ ವಿಶೇಷ ಅನುದಾನ ಮತ್ತು ಪ್ರೋತ್ಸಾಹ ನೀಡಲು ಸದಾ ಸಿದ್ದ ಎಂದರು. ೨೦೨೧-೨೨ನೇ ಸಾಲಿನ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಕೆ.ಎಸ್. ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಗತವರ್ಷದ ಆಯವ್ಯಯ, ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. 2022-23ನೇ ಶೈಕ್ಷಣಿಕ ವರ್ಷದಲ್ಲಿ ನಡೆಸ ಬಹುದಾದ ಕಾರ್ಯಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ., ಸದಸ್ಯರಾದ ಕೆ. ಎನ್ ಸುಬ್ರಹ್ಮಣ್ಯ, ವತ್ಸಲಾರಾಜ್ಞಿ, ಇಂದಿರಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ದಿವ್ಯಾ ಜಿ. ನಿರೂಪಿಸಿದರು. ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಉಪನ್ಯಾಸಕಿ ನವ್ಯ ವಿ.ಪಿ ವಂದಿಸಿದರು.

LEAVE A REPLY

Please enter your comment!
Please enter your name here