ಕಾಣಿಯೂರು: ಕುದ್ಮಾರು ಗ್ರಾಮ ದೈವಸ್ಥಾನ, ಶ್ರೀ ಶೀರಾಡಿ ರಾಜನ್ ದೈವಸ್ಥಾನದಲ್ಲಿ ಶ್ರೀ ನಾಗರಪಂಚಮಿಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಬಾರಿಕೆ ಕುಟುಂಬದ ನಾಗ ದೇವರಿಗೆ ನಾಗರ ಪಂಚಮಿ ಪ್ರಯುಕ್ತ ನಾಗ ತಂಬಿಲ ನಡೆಯಿತು. ತಂತ್ರಿಗಳಾದ ಶ್ರೀ ಕೇಶವ ಭಟ್ ಕೇಕಾನಾಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಗ್ರಾಮಸ್ಥರು, ಅನ್ಯಾಡಿ ಬಾರಿಕೆ ಕುಟುಂಬಸ್ಥರು ಉಪಸ್ಥಿತರಿದ್ದರು.