ಮಾರುತಿ ಸುಜ್ಹುಕಿ ನ್ಯೂ ಬ್ರಿಝಾ ಮಾರುಕಟ್ಟೆಗೆ ಬಿಡುಗಡೆ

0

  • ಇಲೆಕ್ಟ್ರಿಕ್ ಸನ್ ರೂಫ್
  • 360  ಡಿಗ್ರಿ ಕ್ಯಾಮರಾ
  • ಆರಂಭಿಕ ಬೆಲೆ 7.99 ಲಕ್ಷ

 

ಪುತ್ತೂರು : ಕಾರು ತಯಾರಿಕೆ ಹಾಗೂ ಮಾರಾಟದಲ್ಲೂ ಮುಂಚೂಣಿಯಲ್ಲಿರುವ ಹೆಸರಾಂತ ಮಾರುತಿ ಸುಜ್ಹುಕಿಯು, ಎಲೆಕ್ಟ್ರಿಕ್ ಸನ್ ರೂಫ್, ಹೆಡ್ ಅಪ್ ಡಿಸ್ ಪ್ಲೇ, 360  ಡಿಗ್ರಿ ವ್ಯೂ ಕ್ಯಾಮರಾ ಹಾಗೂ ಸ್ಮಾರ್ಟ್ ಪ್ಲೇ ಪ್ರೋ ಪ್ಲಸ್ ಸಹಿತ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಅಲ್ ನ್ಯೂ ಬ್ರಿಝಾ ಕಾರನ್ನು ಇದೀಗ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಅ.1ರಂದು ಇಲ್ಲಿನ ಹಾರಾಡಿ ಭಾರತ್ ಅಟೋಕಾರ್ಸ್ ಶಾಖೆಯಲ್ಲಿ ವಿನೂತನ ಕಾರನ್ನು, ವಿವೇಕಾನಂದ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಎ.ವಿ.ನಾರಾಯಣರವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಬಳಿಕ ಮಾತನಾಡಿ, ಭಾರತ್ ಅಟೋಕಾರ್ಸ್ ಸಂಸ್ಥೆಯು ನುರಿತ ಕಾರ್ಮಿಕ ವರ್ಗದ ಜೊತೆಗೆ ಅತ್ಯುತ್ತಮ ಸೇವೆ ನೀಡುವ ಸಂಸ್ಥೆಯೆಂಬ ಹೆಗ್ಗಳಿಕೆ ಪಡಕೊಂಡಿದೆ. ಹೊಸ, ಹೊಸ ತಂತ್ರಜ್ಞಾನದ ಕಾರುಗಳ ಲಗ್ಗೆಯಿಂದ ಮಾರುಕಟ್ಟೆಯಲ್ಲಿ ಪೈಪೋಟಿಯೂ ಇದೆ. ಮಾರುಕಟ್ಟೆ ಪ್ರವೇಶಿಸಿರುವ ಕಾರಿಗೆ ಉತ್ತಮ ರೀತಿಯ ಬೆಂಬಲ ಸಿಗಲಿಯೆಂದು ಹಾರೈಸಿದರು. ಬಳಿಕ ಪ್ರಥಮ ಗ್ರಾಹಕರಾದ ಉದಯ ಕುಮಾರ್ ರೈ ದಂಪತಿ, ಸಂಪ್ಯ ಹಾಗೂ ಮಹಮ್ಮದ್ ಕುಂಞಯವರಿಗೆ ಕೀಲಿ ನೀಡಿ ಶುಭಹಾರೈಸಿದರು.

ಸಂಸ್ಥೆಯ ವರ್ಕ್ ಶಾಪ್ ಮ್ಯಾನೇಜರ್ ಆನಂದ್ ಮೂಲ್ಯ, ಟೀಂ ಲೀಡರ್‌ಗಳಾದ ಸಂತೋಷ್ ಹಾಗೂ ಜಯರಾಜ್, ಗ್ರಾಹಕರು ಮತ್ತು ಸಿಬ್ಬಂದಿಗಳು ಇದ್ದರು. ಕ್ಯಾಶಿಯರ್ ನವೀನ್ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಪೃಥ್ವಿ ಹಾಗೂ ಮೋಕ್ಷಿತಾ ಪ್ರಾರ್ಥನೆ ನೆರವೇರಿಸಿದರು. ಗಣೇಶ್ ಪಂಜ ಸ್ವಾಗತಿಸಿ ಮಾತನಾಡಿ ಕಾರಿನ ಆರಂಭಿಕ ಬೆಲೆ 7.99 ಲಕ್ಷ ಆಗಿದೆ. ಗ್ರಾಹಕರು ತಮ್ಮ ಹಳೇಯ ಮಾದರಿಯ ಕಾರುಗಳನ್ನು ಕೂಡ ಅತ್ಯುತ್ತಮ ಬೆಲೆಗೆ ವಿನಿಮಯ ಮಾಡೋ ಅವಕಾಶ ಇದೆ. ಜೊತೆಗೆ ಉಳಿತಾಯವು ಇರಲಿದೆಯೆಂದು ತಿಳಿಸಿ ವಂದಿಸಿದರು.

 

ಮಾಹಿತಿಗಾಗಿ: 9538925330/9483542030

LEAVE A REPLY

Please enter your comment!
Please enter your name here