ಫಿಲೋಮಿನಾ ಕಾಲೇಜಿನಲ್ಲಿ ವಿಷನ್ 22 ಐಟಿ ಫೆಸ್ಟ್

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್ ಐಟಿ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬಿಸಿಎ ಹಾಗೂ ಬಿಎಸ್ಸಿ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ‘ವಿಷನ್-22 ಐಟಿ ಫೆಸ್ಟ್’ ಆಯೋಜಿಸಲಾಯಿತು.

ಸಮಾರಂಭವನ್ನು ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊರವರು ಉದ್ಘಾಟಿಸಿ, ಮಾತನಾಡಿ, ನಾವೆಲ್ಲರೂ ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ. ಪ್ರತಿಯೋರ್ವನಲ್ಲೂ ಒಂದಲ್ಲ ಒಂದುಪ್ರತಿಭೆ ಇದ್ದೇ ಇರುತ್ತದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಸಹಕಾರಿಯಾಗುತ್ತವೆ. ಸಮಯ ಪರಿಪಾಲನೆ ಹಾಗೂ ಭಾವನೆಗಳ ನಿಯಂತ್ರಣ ಮಾಡಿದಲ್ಲಿ ಜೀವನದಲ್ಲಿಯಶಸ್ಸು ಗಳಿಸಬಹುದು. ಯಶಸ್ಸು ಅದೃಷ್ಟದಿಂದ ಬರುವುದಿಲ್ಲ. ಪರಿಶ್ರಮದಿಂದ ಬರುತ್ತದೆ. ನೈತಿಕತೆ, ಪ್ರಾಮಾಣಿಕತೆ, ಸಚ್ಚಾರಿತ್ರ್ಯ ನಮ್ಮ ಜೀವನದ ವ್ಯಕ್ತಿತ್ವದ ಭಾಗವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಂಚಾಲಕಿ ರಾಜೇಶ್ವರಿ ಎಂ.ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಐಟಿ ಕ್ಲಬ್ ಅಧ್ಯಕ್ಷ ಆಕಾಶ್ ಸಿ.ಭಟ್ ಸ್ವಾಗತಿಸಿ, ಕಾರ್ಯದರ್ಶಿ ಲಿಖಿತಾ ಎ.ಜೆ. ವಂದಿಸಿದರು. ಶೋಭಿತ್ ಎಸ್ಪಿ. ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರ ಹಾಗೂ ಐಟಿ ಕ್ಲಬ್ ಉಪಾಧ್ಯಕ್ಷೆ ಅನುಜಾ ಜೋಸೆಫ್ ಉಪಸ್ಥಿತರಿದ್ದರು. ಉದ್ಘಾಟನ ಕಾರ್ಯಕ್ರಮದ ಬಳಿಕ ಟೀಂ ಇಂಟ್ರೊ, ಇ-ಡ್ರಾಮಾ, ರೆಮಿನಿಸೆನ್ಸ್, ಗ್ರೂಪ್ ಡಾನ್ಸ್ ಮತ್ತೀತರ ಹಲವು ಸ್ಪರ್ಧೆಗಳನ್ನು ಆಯೋಜಿಸಿಲಾಯಿತು.

LEAVE A REPLY

Please enter your comment!
Please enter your name here