ಪುತ್ತೂರು : 2022-23ನೇ ಸಾಲಿನಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಆತ್ಮ ಯೋಜನೆಯ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಆಸಕ್ತ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಗಳ ಆಯ್ಕೆಯ ಮಾನದಂಡಗಳಲ್ಲಿನ ಅಂಶಗಳನ್ನು ಸಮಾನಾಂತರವಾಗಿ ಆತ್ಮ ಯೋಜನೆಯಲ್ಲೂ ಶೇಷ್ಠ ಕೃಷಿಕ ಪ್ರಶಸ್ತಿಗಳನ್ನು ಆಯ್ದ ರೈತರಿಗೆ ಪುರಸ್ಕರಿಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಅರ್ಜಿದಾರರು ತಾನು ನಿರ್ವಹಿಸುವ ಒಂದು ಚಟುವಟಿಕೆಯಡಿ ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಬೇಕಾಗಿರುತ್ತದೆ.
ಚಟುವಟಿಕೆಗಳು : ಕೃಷಿಯಲ್ಲಿ ಸಮಗ್ರ ಕೃಷಿ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೇಕ್ ತಂತಜ್ಞಾನ ಅಳವಡಿಕೆ(ಹಸಿರು ಮನೆ, ಅಭಿವೃದ್ಧಿ, ಸಸ್ಯಕಾಶಿ, ಕೃಷಿ ಯಾಂತ್ರೀಕರಣ ಇತ್ಯಾದಿ), II) ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆಯಲ್ಲಿ ಯಾವುದಾದರೂ ಒಂದು ಚಟುವಟಿಕೆಗೆ ಮಾತ್ರ ಒಂದು ಅರ್ಜಿಯನ್ನು ಸಲ್ಲಿಸ ಬೇಕಾಗಿರುತ್ತದೆ.
ಅರ್ಜಿಯೊಂದಿಗೆ ಸಂಬಂಧಪಟ್ಟ ಚಟುವಟಿಕೆಯ ಜೆರಾಕ್ಸ್ ಪ್ರತಿಗಳನ್ನು, ಫೋಟೋಗ್ರಾಫ್ಗಳನ್ನು, ಸಿ.ಡಿ.ಗಳನ್ನು ಖರ್ಚು ವೆಚ್ಚಗಳು, ವರಮಾನ, ಪತ್ರಿಕಾ ಪ್ರಕಟಣೆಗಳ ಮಾಹಿತಿ ಇತ್ಯಾದಿಗಳ ಪ್ರತಿ ಲಗತ್ತಿಸಬೇಕು. ಆಳವಡಿಸಿರುವ ತಾಂತ್ರಿಕತೆ, ಪಸ್ತುತ ಸನ್ನಿವೇಶಕ್ಕೆ ಮತ್ತು ರೈತ ಸಮುದಾಯಕ್ಕೆ ಪ್ರೇರಣೆಗೆ ಮತ್ತು ಅಳವಡಿಕೆಗೆ ಸಹಕಾರಿಯಾಗುವಂತಿರಬೇಕು. ಕಳೆದೆರಡು ಸಾಲಿನಲ್ಲಿ ತಾಲೂಕು ಇಲ್ಲವೇ ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದವರು ಮುಂದಿನ ಹಂತದ ಪಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದು, ಆದರೆ ಒಂದು ಬಾರಿ ರಾಜ್ಯಮಟ್ಟದ ಶ್ರೇಷ್ಟ ಕೃಷಿಕ/ಕೃಷಿ ಪಂಡಿತ ಪ್ರಶಸ್ತಿ ಪಡೆದಿದ್ದಲ್ಲಿ ಮನ: ಯಾವುದೇ ತರನಾದ ಪಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಆಸ್ತಕರು ನಿಗದಿತ ಅರ್ಜಿ ನಮೂನೆಯನ್ನು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಮತ್ತೂರು, ಉಪ್ಪಿನಂಗಡಿ, ಕಡಬ ಅಥವಾ ಪುತ್ತೂರು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಲು ಆಗಷ್ಟ್ 31 ಕೊನೆಯ ದಿನಾಂಕವಾಗಿರುತ್ತದೆ.