ಶಾಸಕರ ಸೂಚನೆಯಂತೆ ಸುಳ್ಯಪದವು ಬಸ್ ಸಮಸ್ಯೆ ಪರಿಹರಿಸಲಾಗಿದೆ – ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಸ್ಪಷ್ಟನೆ

0

ಪುತ್ತೂರು: ಪುತ್ತೂರು-ಸುಳ್ಯಪದವು ಮಧ್ಯೆ ಸಂಚರಿಸುವ ಬಸ್‌ನ ವಿಚಾರದಲ್ಲಿ ಕೆಲ ದಿನಗಳಿಂದ ಉಂಟಾಗಿರುವ ವರದಿಗಳ ಬಗ್ಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ‘ಶಾಸಕರ ಸೂಚನೆಯಂತೆ ಬಸ್ ಸಂಚಾರಕ್ಕೆ ಸಂಬಂಽಸಿ ಸೂಕ್ತಕ್ರಮಕೈಗೊಳ್ಳಲಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ಪುತ್ತೂರು-ಬಡಗನ್ನೂರು-ಸುಳ್ಯಪದವು ರಸ್ತೆಯಲ್ಲಿನ ಬಸ್ ಸಂಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಸಲಹೆಯಂತೆ ಪರಿಹರಿಸಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ವಾಸ್ತವವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಶಾಸಕ ಸಂಜೀವ ಮಠಂದೂರುರವರೂ ಸಹ ದೂರವಾಣಿ ಮೂಲಕ ಸೂಚನೆ ನೀಡಿದ್ದು ಅದರಂತೆ ಬಸ್ ಸಂಚಾರಕ್ಕೆ ಸೂಕ್ತಕ್ರಮಕೈಗೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here