ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಾಧನೆಗೆ  ಐದನೇ ಬಾರಿ ಪ್ರಶಸ್ತಿ ಪುರಸ್ಕಾರ

0

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘ ತನ್ನ ವಿಶೇಷ ಸಾಧನೆಗಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಶಸ್ತಿಗೆ ಐದನೇ  ಬಾರಿ ಆಯ್ಕೆಯಾಗಿದೆ. 2021-22 ನೇ ಸಾಲಿನ ಸಹಕಾರಿ ಸಂಘದ ಸಾಧನೆಯನ್ನು ಪರಿಗಣಿಸಿ ಆಡಿಟ್ ವರ್ಗೀಕರಣದಲ್ಲಿ ಎ ತರಗತಿ ಸ್ಥಾನ ಹೊಂದಿ ಅತ್ಯುತ್ತಮವಾದ ಕಾರ್ಯ ನಿರ್ವಹಣೆಗಾಗಿ ಪ್ರಶಸ್ತಿಗೆ ಭಾಜನವಾಗಿದೆ. ಪ್ರಸ್ತುತ ಸಾಲಿನಲ್ಲಿ ಸಂಘ 6475 ಎ ತರಗತಿ ಸದಸ್ಯರನ್ನು ಹೊಂದಿದ್ದು 3.9 ಕೋಟಿ ಪಾಲು ಬಂಡವಾಳ ಹೊಂದಿದೆ. ಸಹಕಾರಿ ಸಂಘವು 17.10 ಕೋಟಿ ರೂ. ಠೇವಣಿ ಹೊಂದಿದೆ ಎಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.

ಸಂಘದ ಕಾರ್ಯವ್ಯಾಪ್ತಿ: ಬನ್ನೂರು ಸಹಕಾರಿ ಸಂಘದ ಕಾರ್ಯ ಕ್ಷೇತ್ರ ವ್ಯಾಪ್ತಿಯು ಬನ್ನೂರು ಬೆಳ್ಳಿಪ್ಪಾಡಿ. ಕೋಡಿಂಬಾಡಿ, ಚಿಕ್ಕಮುಡ್ನೂರು, ಪಡ್ನೂರು, ಕೊಡಿಪ್ಪಾಡಿ, ಕುಳ, ಕಬಕ, ಪುತ್ತೂರು ಕಸಬಾ ಹೀಗೆ 9  ಗ್ರಾಮಗಳನ್ನು ಒಳಗೊಂಡಿದೆ. ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್ ವ್ಯವಸ್ಥೆ ಇದ್ದು ಪೂರಕವಾಗಿ ತ್ವರಿತ ಸೇವೆಗಾಗಿ ನೆಫ್ಟ್ / ಆರ್‌ಟಿಜಿಎಸ್ ವ್ಯವಸ್ಥೆಗಳನ್ನು ಹಮ್ಮಿಕೊಳ್ಳಲಾಗಿದೆ. 2021-22ನೇ ಸಾಲಿನ ಸಂಘದ ಉತ್ತಮ ಸಾಧನೆಗೆ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಪ್ರಶಸ್ತಿ ಪಡೆದುಕೊಂಡಿದ್ದು ಇದೀಗ ಐದನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಸಂಘದ ಅಭಿವೃದ್ಧಿಗೆ ಪೂರಕವಾಗಿ 12 ಮಂದಿ ನಿರ್ದೇಶಕರಿದ್ದು, ಆಡಳಿತ ಮಂಡಳಿ ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾಗಿ ರಾಜಶೇಖರ್ ಜೈನ್, ನಿರ್ದೇಶಕರುಗಳಾಗಿ ಸುಭಾಸ್ ನಾಯಕ್, ಜಯಲಕ್ಷ್ಮೀ ಸುರೇಶ್, ಆಶ್ರಫ್ ಕಲ್ಲೇಗ, ದೇವಾನಂದ ಕೆ, ಮೋಹನ ಪಕ್ಕಳ ಕುಂಡಾಪು, ಸ್ಮಿತಾ ಭಂಢಾರಿ, ಸುಬ್ರಹ್ಮಣ್ಯ ಗೌಡ, ರಾಜು, ಶ್ರೀನಿವಾಸ, ಸುಂದರ ಪೂಜಾರಿ ಬಡಾವು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರತಿನಿಧಿಯಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ವಲಯ ಮೇಲ್ವಿಚಾರಕರಾಗಿ ವಸಂತ ಇವರುಗಳು ಕಾರ್ಯನಿರ್ವಹಿಸುತ್ತಿದ್ದು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಗೋಪಾಲಕೃಷ್ಣ ಭಟ್ ಹಾಗೂ ಸಿಬ್ಬಂದಿಗಳು ಅಲ್ಲದೆ ಸಂಘದ ಸಾಲಗಾರ ಸದಸ್ಯರು ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿಸಿ ಸಂಘದ ಶ್ರೇಯೋಭಿವೃದ್ಧಿಗೆ ಕಾರಣರಾಗಿರುತ್ತಾರೆ ಎಂದು ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.

ಉತ್ತಮ ಸಾಧನೆಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವತಿಯಿಂದ ಬನ್ನೂರು ರೈತರ ಸೇವಾಸಹಕಾರಿ ಸಂಘ ಐದನೇ ಬಾರಿಗೆ ಪ್ರಶಸ್ತಿಗೆ ಆಯ್ಕೆ ಗೊಂಡಿರುವುದು ನನಗೆ ಅತೀವ ಸಂತೋಷವಾಗಿದೆ. ಸತತವಾಗಿ ಪ್ರಶಸ್ತಿ ಗಳಿಸಲು ಕಾರಣಕರ್ತರಾದ ಎಲ್ಲಾ ಸಿಬ್ಬಂದಿಗಳಿಗೆ, ಸದಸ್ಯರಿಗೆ ಕೃತಜ್ಞತೆಗಳು ಎಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ

ಆ.5ರಂದು ಪ್ರಶಸ್ತಿ ಪ್ರದಾನ: ಮಂಗಳೂರಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ಆ.5ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here