ಸೇನೆಯಿಂದ ನಿವೃತ್ತರಾದ ನೆಲಪ್ಪಾಲು ವಿಜಯ ಕುಮಾರ್; ಪುತ್ತೂರಿನಲ್ಲಿ ಅದ್ದೂರಿಯ ಸ್ವಾಗತ

0

ಪುತ್ತೂರು:ಕಳೆದ 21 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿರುವ ನೆಲಪ್ಪಾಲು ನಿವಾಸಿ ವಿಜಯ ಕುಮಾರ್ ಎನ್ ಅವರು ಜು.31ರಂದು ಸೇವಾ ನಿವೃತ್ತಿ ಹೊಂದಿದ್ದು, ಆ.2ರಂದು ರಾತ್ರಿ ಅವರು ಹುಟ್ಟೂರಿಗೆ ಆಗಮಿಸುವ ಸಂದರ್ಭದಲ್ಲಿ ಪುತ್ತೂರು ನೆಹರುನಗರದಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ವಿಜಯ ಕುಮಾರ್ ಅವರು ನೆಹರುನಗರದಲ್ಲಿ ಬಸ್ಸಿನಲ್ಲಿ ಇಳಿದ ಸಂದರ್ಭ ಅವರ ಬಂಧು ಬಳಗ, ಸ್ನೇಹಿತರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ವಿಜಯ ಕುಮಾರ್ ಅವರು ಬಸ್‌ನಿಂದ ಇಳಿದ ತಕ್ಷಣ ತನ್ನ ತಾಯಿ ಯಶೋದಾ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ಸುದಾನ ವಸತಿಯುತ ಶಾಲೆಯಲ್ಲಿ ಶಿಕ್ಷಕಿಯಾಗಿರುವ ವಿಜಯ ಕುಮಾರ್ ಪತ್ನಿ ರಂಜಿತಾ, ಪುತ್ರಿ ಸೃಷ್ಟಿ, ಪುತ್ರ ಸಂಭ್ರಮ್, ಬಿಜೆಪಿ ಬೂತ್ ಸಮಿತಿಯ ನಿತೇಶ್, ಪಡ್ನೂರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಧುಸೂದನ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಆನಂದ ಗೌಡ ಮೂವಪ್ಪು, ಜಗನ್ನಾಥ ನೆಲಪ್ಪಾಲು, ಪಡ್ನೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಯತೀಶ್, ಶ್ವೇತಾ ಗಣೇಶ್, ದಾಮೋದರ್, ದಿವಾಕರ್ ಒಡ್ಡ, ಹಂಝ ನೆಲಪ್ಪಾಲು, ಹಾರೀಸ್ ನೆಲಪ್ಪಾಲು, ಅಕ್ಷಯ್ ನೆಲಪ್ಪಾಲು, ಜಯರಾಮ ನೆಲಪ್ಪಾಲು, ದೇವಿ ನೆಹರುನಗರ, ಪ್ರೀತೀಶ್ ನೆಲಪ್ಪಾಲು, ಹರಿಶ್ಚಂದ್ರ ನೆಲಪ್ಪಾಲು, ಪ್ರಶಾಂತ್ ಕಲ್ಲೇಗ ಮತ್ತಿತರರು ಹರ್ಷ ವ್ಯಕ್ತಪಡಿಸಿ, ಸಿಹಿ ತಿಂಡಿ ಹಂಚಿದರು.

LEAVE A REPLY

Please enter your comment!
Please enter your name here