ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ –  ಜಿಲ್ಲಾಧ್ಯಕ್ಷರಾಗಿ ವಿಟ್ಲದ ಲಿಲ್ಲಿ ಪಾಯಸ್ ಆಯ್ಕೆ

0

ವಿಟ್ಲ: ಒಕ್ಕೆತ್ತೂರು ನಿವಾಸಿ ನಿವೃತ್ತ ಸೈನಿಕ ಲಾರೆನ್ಸ್ ಪಾಯಸ್-ಲೂಸಿ ಪಾಯಸ್ ದಂಪತಿಯ ಪುತ್ರಿ ಲಿಲ್ಲಿ ಪಾಯಸ್‌ರವರು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಗೋಳ್ತಮಜಲು ಸರಕಾರಿ ಪ್ರೌಢಶಾಲೆಯಲ್ಲಿ 12ವರ್ಷಗಳ ಕಾಲ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಇವರು ಬಳಿಕ ವರ್ಗಾಣೆಯಾಗಿ ಅತ್ತಾವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 13ವರ್ಷಗಳಿಂದ ದೈಹಿಕ ತರಬೇತಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಟ್ಲದ ಬಾಲಿಕಾ ಪ್ರೌಢಶಾಲೆ ಮತ್ತು ವಿಟ್ಲ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಇವರು ಈ ಹಿಂದೆ ದೈಹಿಕ ಶಿಕ್ಷಣದಲ್ಲಿ ಜಿಲ್ಲಾ ಪ್ರಶಸ್ತಿ ಪಡೆದಿದ್ದರು. ಇದೀಗ ಪ್ರಥಮ ಬಾರಿಗೆ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here