ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆ – ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಬೂಸ್ಟರ್ ಲಸಿಕೆ ಅಭಿಯಾನ

0

ರೇಡಿಯೋ ಪಾಂಚಜನ್ಯದಿಂದ ಸ್ವಾಸ್ತ್ರ್ಯ ಸಂಕಲ್ಪ ಕಾರ್ಯಕ್ರಮ

ಪುತ್ತೂರು: ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಕೋವಿಡ್ ಬೂಸ್ಟರ್ ಡೋಸ್ ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್‌ಗಳಲ್ಲಿ ಕೋವಿಡ್ ಬೂಸ್ಟರ್ ಲಸಿಕೆ ಅಭಿಯಾನ ನಡೆಯುತ್ತಿದ್ದು, ಆ.3ರಂದು ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಅಭಿಯಾನ ನಡೆಯಿತು.

18 ವರ್ಷದಿಂದ 59 ವಯಸ್ಸಿನವರಿಗೆ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಅಥವಾ ಬೂಸ್ಟರ್ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಈಗಾಗಲೇ 2ನೇ ಡೋಸ್ ಲಸಿಕೆ ಪಡೆದವರು ಆರು ತಿಂಗಳಾಗಿದ್ದಲ್ಲಿ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಅಭಿಯಾನವನ್ನು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸ್ಥಳೀಯ ಸದಸ್ಯರಾಗಿರುವ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಸತೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ದಯಾಕರ್, ಸವಿತಾ ಮತ್ತಿತರರು ಉಪಸ್ಥಿತರಿದ್ದರು. ಸರಕಾರಿ ಆಸ್ಪತ್ರೆಯ ಎ.ಎನ್.ಎಮ್ ನಿಶಾ, ಆಶಾ ಕಾರ್ಯಕರ್ತೆ ಜಯಲತಾ ಲಸಿಕೆ ನೀಡಿಕೆಯ ನಿರ್ವಹಣೆ ಮಾಡಿದರು.

ರೇಡಿಯೋ ಪಾಂಚಜನ್ಯದಿಂದ ಸ್ವಾಸ್ತ್ಯ ಸಂಕಲ್ಪ:

ಯುನಿಸೆಫ್ ಮತ್ತು ಕಮ್ಯೂನಿಟಿ ರೇಡಿಯೋ ಸಹಕಾರದೊಂದಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ರೇಡಿಯೋ ಪಾಂಚಜನ್ಯದಿಂದ ಕೋವಿಡ್ ಜಾಗೃತಿಯ ಕುರಿತು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವೂ ಬೂಸ್ಟರ್ ಅಭಿಯಾನದ ಜೊತೆ ನಡೆಯಿತು. ರೇಡಿಯೋ ಪಾಂಚಜನ್ಯದ ತೇಜಸ್ವಿನಿ ಅವರು ಮಾಹಿತಿ ಕಾರ್ಯಕ್ರಮ ನೀಡಿದರು.

LEAVE A REPLY

Please enter your comment!
Please enter your name here