ರೋಟರಿ ಯುವ, ಉಷಾ ಪಾಲಿಕ್ಲಿನಿಕ್ ಸಹಯೋಗದಲ್ಲಿ ಉಚಿತ ಮೂಲವ್ಯಾಧಿ ತಪಾಸಣಾ ಶಿಬಿರ

0

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ದರ್ಬೆಯ ಉಷಾ ಪಾಲಿಕ್ಲಿನಿಕ್ ಸಹಯೋಗದಲ್ಲಿ ಜು.31ರಂದು ಉಚಿತ ಮೂಲವ್ಯಾದಿ ತಪಾಸಣೆ ಶಿಬಿರ ಶಸ್ತ್ರಚಿಕಿತ್ಸಾ ತಜ್ಞ ಡಾ.ಅರವಿಂದ್ ರೈ ನಡೆಸಿಕೊಟ್ಟರು.

ನಿವೃತ್ತ ಪೊಲೀಸ್ ಡಿವೈಎಸ್ಪಿ ಜಗನ್ನಾಥ್ ರೈ ಮಾದೊಡಿ ದೀಪ ಬೆಳಗಿಸಿ ಉದ್ಘಾಟಿಸಿ ರೋಟರಿ ಮತ್ತು ಉಷಾ ಪಾಲಿಕ್ಲಿನಿಕ್ ಅವರು ನಡೆಸುವ ಈ ಉಚಿತ ಆರೋಗ್ಯ ತಪಾಸಣಾ ಶಿಬಿರವು ಉತ್ತಮ ಕಾರ್ಯಕ್ರಮವಾಗಿದೆ. ಅಗತ್ಯವುಳ್ಳವರಿಗೆ ಇದು ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು. ರೋಟರಿ ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ ಮಾತನಾಡಿ ರೋಟರಿಯ ಆರೋಗ್ಯಸಿರಿ ಯೋಜನೆಯಡಿಯಲ್ಲಿ ನಿರಂತರವಾಗಿ ಬೇರೆಬೇರೆ ತಜ್ಞ ವೈದ್ಯರುಗಳಿಂದ ಪ್ರತಿವಾರವೂ ಈ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶ್ವಾಸಕೋಶ ತಜ್ಞ ಡಾ.ಪ್ರೀತಿರಾಜ್ ಬಳ್ಳಾಲ್, ಮೂತ್ರರೋಗ ತಜ್ಞ ಡಾ. ಅವಿನಾಶ್ ಜೆ, ಉಷಾ ಮೆಡಿಕಲ್ಸ್ ಮಾಲಕ ಗಣೇಶ್ ಭಟ್, ರೋಟರಿ ಯುವ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ, ಪೂರ್ವಾಧ್ಯಕ್ಷ ಭರತ್ ಪೈ ಉಪಸ್ಥಿತರಿದ್ದರು. ಪುತ್ತೂರು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

[box bg=”#” color=”#” border=”#” radius=”15″]ತಮ್ಮ ಸೇವಾ ಅವಧಿಯಲ್ಲಿ ಭಾರತದ ಮೂರು ಪ್ರಧಾನಮಂತ್ರಿಗಳ ಭದ್ರತಾ ತಂಡದಲ್ಲಿ ಹಾಗೂ ಕರ್ನಾಟಕದ ಅನೇಕ ಮುಖ್ಯಮಂತ್ರಿಗಳಿಗೆ ಭದ್ರತಾ ತಂಡದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಡಿವೈಎಸ್ಪಿ ಜಗನ್ನಾಥ್ ರೈ ಮಾದೊಡಿರವರಿಗೆ ರೋಟರಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.[/box]

LEAVE A REPLY

Please enter your comment!
Please enter your name here