ಬಜತ್ತೂರು : ಒಕ್ಕಲಿಗ ಸ್ವ-ಸಹಾಯ ಸಂಘದ ಒಕ್ಕೂಟದ ಪದಗ್ರಹಣ, ಆಟಿಡೊಂಜಿ ದಿನ

0

ಪುತ್ತೂರು : ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು, ಒಕ್ಕಲಿಗ ಗೌಡ ಸೇವಾ ಸಂಘ ಬಜತ್ತೂರು ಗ್ರಾಮ ಸಮಿತಿ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಬಜತ್ತೂರು ಗ್ರಾಮ ಸಮಿತಿ ಮತ್ತು ಒಕ್ಕಲಿಗ ಸ್ವ-ಸಹಾಯ ಸಂಘಗಳ ಒಕ್ಕೂಟ ಬಜತ್ತೂರು ಗ್ರಾಮ ಇದರ ಸಹಯೋಗದಲ್ಲಿ ಆಟಿಡೊಂಜಿ ದಿನ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಜು.24 ರಂದು ಮುದ್ಯ ಶ್ರೀಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಧನಂಜಯ ಗೌಡ ಮುದ್ಯ ಕಾರ್ಯಕ್ರಮ ಉದ್ಘಾಟಿಸಿದರು. ಶಿವಣ್ಣಗೌಡ ಬಿದಿರಾಡಿ ಉಪಸ್ಥಿತರಿದ್ದರು. ನೆಲ್ಯಾಡಿ ಸಂತ ಚಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಚೇತನ್ ಆನೆಗುಂಡಿ ಧಾರ್ಮಿಕ ಉಪನ್ಯಾಸ ನೀಡಿದರು. ಲಿಂಗಪ್ಪಗೌಡ ಬಾರಿಕೆ, ಹೊನ್ನಪ್ಪ ಗೌಡ ಸುಳ್ಯ, ಸುಧಾಕೃಷ್ಣ ನಕ್ಕರಾಜೆ, ರಾಮಣ್ಣ ಗೌಡ ಮಣಿಕ್ಕಳ, ನೊಣಯ್ಯಗೌಡ ಪದಕ ಉಪಸ್ಥಿತರಿದ್ದರು.

ಒಕ್ಕಲಿಗ ಗೌಡ ಸೇವಾ ಸಂಘ ಬಜತ್ತೂರು ಗ್ರಾಮ ಸಮಿತಿ ಅಧ್ಯಕ್ಷ ವಸಂತ ಗೌಡ ಪಿಜಕ್ಕಲ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ವಿ ನಾರಾಯಣ ಒಕ್ಕೂಟದ ಪದಾಧಿಕಾರಿಗಳಿಗೆ ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷರಾದ ಡಿ.ವಿ. ಮನೋಹರ್ ಇವರು ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಸಂತ ಗೌಡ ಪಿಜಕ್ಕಳ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಅತ್ಯುತ್ತಮ ಸಂಘ ಗುರುತಿಸಿ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಮತ್ತು ಊರ ಗೌಡರಿಗೆ ಬಜತ್ತೂರು ’ಎ’ ಒಕ್ಕೂಟದ ಅಧ್ಯಕ್ಷ ಕೇಶವ ಗೌಡ ಬಾರಿಕೆ ಮತ್ತು ಬಜತ್ತೂರು ’ಬಿ’ ಒಕ್ಕೂಟದ ಅಧ್ಯಕ್ಷರಾದ ದೇರಣ್ಣ ಗೌಡ ಓಮಂದೂರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ವಸಂತಿ ಬೆಡ್ರೋಡ್ಡಿ ಬಜತ್ತೂರು ’ಎ’ ಒಕ್ಕೂಟದ ವರದಿಯನ್ನು ಹಾಗೂ ಸುಜಾತ ನೆಕ್ಕರೆ ಬಜತ್ತೂರು ’ಬಿ’ ಒಕ್ಕೂಟದ ವರದಿ ತಿಳಿಸಿದರು. ಮೇಲ್ವಿಚಾರಕಿ ಸುಮಲತಾ ನಿರೂಪಿಸಿದರು. ಪ್ರೇರಕರಾದ ತಾರಾನಾಥ್ ಕೆ.ಹೆಚ್ ಉಪಸ್ಥಿತರಿದ್ದರು. ಬಜತ್ತೂರು ’ಎ’ ಒಕ್ಕೂಟದ ಅಧ್ಯಕ್ಷ ಕೇಶವ ಗೌಡ ಬಾರಿಕೆ ಸ್ವಾಗತಿಸಿದರು. ಗೋಪಾಲ ದಡ್ಡು ವಂದಿಸಿದರು.

LEAVE A REPLY

Please enter your comment!
Please enter your name here