ಆ.7ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 5ನೇ ತಿಂಗಳ ಉಚಿತ ವೈದ್ಯಕೀಯ ಶಿಬಿರ

0

  • ಈ ಬಾರಿ ಕಣ್ಣಿನ ಚಿಕಿತ್ಸೆ, ಎಲುಬು, ಮೂಳೆಸಾಂದ್ರತೆ, ಹೋಮಿಯೋಪತಿ ಚಿಕಿತ್ಸೆ, ಬೂಸ್ಟರ್ ಡೋಸ್

 

 


ಪುತ್ತೂರು; ಪ್ರತಿ ತಿಂಗಳು ಒಂದೊಂದು ವಿಶೇಷ ಚಿಕಿತ್ಸೆಗಳನ್ನು ಅಳವಡಿಸಿಕೊಂಡು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುವ ಉಚಿತ ವೈದ್ಯಕೀಯ ಶಿಬಿರವು ಆ.7ರಂದು ನಡೆಯಲಿದೆ. ಈ ಭಾರಿಯ ಶಿಬಿರದಲ್ಲಿ ಕಣ್ಣಿನ ಚಿಕಿತ್ಸೆ, ಕೀಲು ಮತ್ತು ಎಲುಬು ಚಿಕಿತ್ಸೆ, ಹೋಮಿಯೋಪತಿಕ್ ಚಿಕಿತ್ಸೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೊಸ್ ವಿತರಣೆಯು ನಡೆಸುವುದಾಗಿ ಪೂರ್ವಬಾವಿ ಸಭೆಯಲ್ಲಿ ತೀಮಾನಿಸಲಾಗಿದೆ.


ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ನವಚೇತನಾ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಹಯೋಗದಲ್ಲಿ ಪ್ರತಿ ತಿಂಗಳ ದೇವಸ್ಥಾನದ ಭಕ್ತರಿಗಾಗಿ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಿಗಳನ್ನು ಕಳೆದ ೪ ತಿಂಗಳುಗಳಿಂದ ನಡೆಯುತ್ತಿದೆ. ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಯುವ ಶಿಬಿರದಲ್ಲಿ ಜನತೆಗೆ ತಮ್ಮ ಆರೋಗ್ಯ ರಕ್ಷಣೆಗಾಗಿ ಆವಶ್ಯಕವಾಗಿರುವ ವಿಶೇಷವಾದ ಒಂದೊಂದು ಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸುತ್ತಾ ಶಿಬಿರವು ಜನರ ಮೆಚ್ಚುಗೆ ಪಡೆಯುತ್ತಾ ಯಶಸ್ವಿಯಾಗಿ ಸಾಗುತ್ತಿದೆ. ವಿವಿಧ ಖಾಯಿಲೆಗಳಿಗೆ ಸಂಬಂಧಿಸಿದಂತೆ ವಿಶೇಷ ವೈದ್ಯರ ಮೂಲಕ ಜನತೆಗೆ ಉಚಿತವಾಗಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಶಿಬಿರದಲ್ಲಿ ಚಿಕಿತ್ಸೆ ಹಾಗೂ ಅವರಿಗೆ ಒಂದು ತಿಂಗಳಿಗೆ ಬೇಕಾಗುವಂತಹ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಉಚಿತ ಚಿಕಿತ್ಸೆ, ಔಷಧಿಗಳ ಜೊತೆಗೆ ಊಟ, ಉಪಾಹಾರಗಳು ಶಿಬಿರಾರ್ಥಿಗಳಿಗೆ ದೊರೆಯುತ್ತಿದೆ. ವಿವಿಧ ವಿಭಾಗಗಳ ವೈದ್ಯರುಗಳು ಶಿಬಿರದಲ್ಲಿ ಉಚಿತ ಚಿಕಿತ್ಸೆ ನೀಡುವಲ್ಲಿ ಕೈಜೋಡಿಸಿಕೊಳ್ಳುತ್ತಿದ್ದು ಶಿಬಿರವು ಇನ್ನಷ್ಟು ಮಹತ್ವ ಪಡೆಯುತ್ತಿದೆ.

 


ಈ ಭಾರಿಯ ಶಿಬಿರದಲ್ಲೇನಿದೆ…!
ಈ ಭಾರಿಯ ಉಚಿತ ಶಿಬಿರದಲ್ಲಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಕಣ್ಣಿನ ಚಿಕಿತ್ಸೆ ನಡೆಸಿ ಆವಶ್ಯಕತೆಯುಳ್ಳವರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಕಣ್ಣಿನ ಚಿಕಿತ್ಸಾ ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ.ಆಶಾಜ್ಯೋತಿ ಪುತ್ತೂರಾಯ, ಪಾರೆ ಕ್ಲಿನಿಕ್‌ನ ಡಾ.ಪ್ರವೀಣ್ ಪಾರೆ ತಪಾಸಣೆ ನಡೆಸಲಿದ್ದಾರೆ. ಪುತ್ತೂರು ಪಾಲಿಕ್ಲಿನಿಕ್‌ನ ಡಾ.ಸಚಿನ್ ಶಂಕರ್ ನೇತೃತ್ವದಲ್ಲಿ ಕೀಲು ಹಾಗೂ ಎಲುಬು ಚಿಕಿತ್ಸೆಗಳು, ಡಾ.ರಮೇಶ್ ಭಟ್‌ರವರಿಂದ ಹೋಮಿಯೋಪಥಿ ಚಿಕಿತ್ಸೆಗಳು, ಮೂಳೆ ಸಾಂದ್ರತೆ ಪರೀಕ್ಷೆ ವಿಶೇಷವಾಗಿ ದೊರೆಯಲಿದೆ. ೧೮ ವರ್ಷ ಮೇಲ್ಪಟ್ಟರಿಗೆ, ಆರೋಗ್ಯ ಇಲಾಖೆಯಿಂದ ಬೂಸ್ಟರ್ ಡೋಸ್ ವಿತರಣೆಯು ನಡೆಯಲಿದೆ. ಇದರ ಜೊತೆಗೆ ದರ್ಬೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ನೇತೃತ್ವದಲ್ಲಿ ರಕ್ತಪರೀಕ್ಷೆ ಹಾಗೂ ಇಸಿಜಿ, ಇತರ ಸಾಮಾನ್ಯ ಪರೀಕ್ಷೆಗಳು ನಡೆಯಲಿದೆ. ಇದರ ಜೊತೆಗೆ ವೈದ್ಯಕೀಯ ತಜ್ಞ ಡಾ ಸುರೇಶ್ ಪುತ್ತೂರಾಯ, ಆಯುರ್ವೇದ ತಜ್ಞರಾದ ಡಾ.ಸಾಯಿಪ್ರಕಾಶ್ ಹಾಗೂ ಡಾ.ದೀಕ್ಷಾ ಶಿಬಿರದಲ್ಲಿ ತಜ್ಞ ವೈದ್ಯರುಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಸುರೇಶ್ ಪುತ್ತೂರಾಯ ತಿಳಿಸಿದರು.

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಣೆ
ದೇಶದ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಆ.೧೩ರಂದು ದೇವಸ್ಥಾನದಲ್ಲಿ ರಕ್ತದಾನ ಶಿಬಿರ, ಹರ್ ಘರ್ ಸ್ವಾತಂತ್ರ್ಯೋತ್ಸವ ಮನೆಗಳಿಗೆ ರಾಷ್ಟ್ರಧ್ವಜ ವಿತರಣೆ, ಆ.೧೪ರಂದು ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆ, ಆ.೧೫ರಂದು ಸ್ವಾತಂತ್ರ್ಯೋತ್ಸವದ ಆಚರಣೆ ಹಾಗೂ ಉಚಿತ ವೈದ್ಯಕೀಯ ಶಿಬಿರದಲ್ಲಿ ಅನ್ನದಾನಿಗಳಾಗಿ ಸಹಕರಿಸಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಆರೋಗ್ಯ ರಕ್ಷಾ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ, ಗೌರವ ಸಲಹೆಗಾರರಾದ ಅರುಣ್ ಕುಮಾರ್ ಪುತ್ತಿಲ, ಭೀಮಯ್ಯ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯ ಲಕ್ಷ್ಮಣ್ ಬೈಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದಯ ಕುಮಾರ್ ಎಸ್ ಸಂಪ್ಯ ಸ್ವಾಗತಿಸಿ, ಹರಿಣಿ ಪುತ್ತೂರಾಯ ವಂದಿಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ವಿನ್ಯಾಸ್ ಯು.ಎಸ್., ನಗರ ಸಭಾ ಸದಸ್ಯ ಶೀನಪ್ಪ ನಾಯ್ಕ, ನವಚೇತನಾ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್., ಪ್ರಮುಖರಾದ ರಮೇಶ್ ರೈ ಮೊಟ್ಟೆತ್ತಡ್ಕ, ರಾಜೇಶ್ ರೈ, ರವೀಂದ್ರ ಪೂಜಾರಿ, ಜಯರಾಮ ಟಿ.ಪಂಜಳ, ಉಮೇಶ್ ಎಸ್.ಕೆ., ಸಂತೋಷ್ ಮುಕ್ರಂಪಾಡಿ, ರವಿನಾಥ ಗೌಡ ಬೈಲಾಡಿ, ಮಂಜಪ್ಪ ಗೌಡ ಬೈಲಾಡಿ, ನಾರಾಯಣ ನಾಯ್ಕ್ ಪಂಜಲ, ಶಿವಪ್ಪ ಮೂಲ್ಯ, ಗೋಪಾಲಕೃಷ್ಣ ಭಟ್, ರವೀಂದ್ರ ಉದಯಗಿರಿ ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here