ಡಾ. ಅನಿಲ್ ಈಶೋ ಅವರಿಂದ ಕಡಬ ಬಿ.ಎಮ್.ಎಸ್. ಕಛೇರಿಗೆ ಕಂಪ್ಯೂಟರ್ ಕೊಡುಗೆ

0

ಕಡಬ: ಬಿಜೆಪಿಯ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಡಾ.ಅನಿಲ್ ಈಶೋ ರವರು ಕಡಬದಲ್ಲಿರುವ ಭಾರತೀಯ ಮಜ್ದೂರು ಸಂಘದ ಕಛೇರಿಗೆ ಎರಡು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದು ಇದರ ಹಸ್ತಾಂತರ ಕಾರ್ಯಕ್ರಮ ಅ.1ರಂದು ನಡೆಯಿತು.

ಕಡಬ ಶ್ರೀ ರಾಂ ಟವರ‍್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯ ಮಜ್ದೂರು ಸಂಘದ ಕಛೇರಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಸರಕಾರದ ವಿವಿಧ ಯೋಜನೆಗಳ ಸೇವೆಗಳು ಲಭ್ಯವಿದ್ದು, ಈ ಕಛೇರಿಗೆ ಕಂಪ್ಯೂಟರ್ ಪರಿಕರಗಳನ್ನು ಡಾ. ಅನಿಲ್ ಈಶೋ ಕೊಡುಗೆಯಾಗಿ ನೀಡಿದ್ದು ಸಂಸ್ಥೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತು.ಚಂದ್ರಶೇಖರ್, ಬಿ.ಎಮ್,ಎಸ್.ನ ಸಂಘಟನಾ ಕಾರ್ಯದರ್ಶಿ ಉದಯಕುಮಾರ್ ಪೂವಲ, ಖಜಾಂಜಿ ಜನಾರ್ದನ, ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಶ್ರೀರಾಂ ಟವರ‍್ಸ್ ಮಾಲಕ ಶಿವರಾಮ ಶೆಟ್ಟಿ ಕೇಪು, ಪ್ರಮುಖರಾದ ಶಿವಪ್ರಸಾದ್ ರೈ ಮೈಲೇರಿ, ಗಿರೀಶ್ ಎ.ಪಿ, ಅಜಿತ್ ರೈ ಆರ್ತಿಲ, ಪ್ರಮೋದ್ ರೈ ನಂದುಗುರಿ, ಬಾಲಚಂದ್ರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here