ಸಂಚಾರ, ಮಹಿಳಾ, ಕಡಬ, ಉಪ್ಪಿನಂಗಡಿ ಠಾಣೆ ಪೊಲೀಸರ ವರ್ಗಾವರ್ಗಿ

0

ಪುತ್ತೂರು:ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವೊಂದು ಪೊಲೀಸ್ ಕಾನ್‌ಸ್ಟೇಬಲ್, ಹೆಡ್‌ಕಾನ್‌ಸ್ಟೇಬಲ್‌ಗಳು ಹಾಗೂ ಓರ್ವ ಎಎಸ್‌ಐಯವರನ್ನು ಕೋರಿಕೆ ವರ್ಗಾವಣೆ ಮಾಡಿ ದ.ಕ.ಜಿಲ್ಲಾ ಪೊಲೀಸ್ ಅಽಕ್ಷಕರು ಆದೇಶ ಹೊರಡಿಸಿದ್ದಾರೆ.‘ಸೇವಾವಽಯಲ್ಲಿ ಒಂದು ಬಾರಿ ಮಾತ್ರ’ ಎಂದು ಪರಿಗಣಿಸಿ ಪರಸ್ಪರ ಸ್ಥಳ ಬದಲಾವಣೆ ಮಾಡಿ ಆದೇಶಿಸಲಾಗಿದೆ.ವಿವರ ಇಂತಿದೆ..

ಕಡಬ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಶೈಲ ಎಂ.ಕೆ.ಅವರನ್ನು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯಿಂದ ಮಲ್ಲಿಕಾರ್ಜುನಯ್ಯ ಮುಳ್ಳಾಮಠ ಅವರನ್ನು ಕಡಬ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ಪ್ರತಾಪ್ ಅವರನ್ನು ಉಪ್ಪಿನಂಗಡಿ ಠಾಣೆಗೆ, ಉಪ್ಪಿನಂಗಡಿ ಠಾಣೆಯ ಗಂಗಾ ನಾಯ್ಕ ಎಸ್.ಸಿ.ಅವರನ್ನು ಮಹಿಳಾ ಪೊಲೀಸ್ ಠಾಣೆಗೆ, ಬೆಳ್ತಂಗಡಿ ಠಾಣೆಯ ಸಿಹೆಚ್‌ಸಿ ಶಿವರಾಮ ರೈ ಅವರನ್ನು ಉಪ್ಪಿನಂಗಡಿ ಠಾಣೆಗೆ, ಉಪ್ಪಿನಂಗಡಿ ಠಾಣೆಯ ಸವಿತಾ ಎ.ಅವರನ್ನು ಬೆಳ್ತಂಗಡಿ ಸಂಚಾರ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.ಅದೇ ರೀತಿ, ಸುಳ್ಯ ಪೊಲೀಸ್ ಠಾಣೆಯ ಮಹಿಳಾ ಹೆಡ್‌ಕಾನ್‌ಸ್ಟೇಬಲ್ ಶ್ರೀಮತಿ ಸಂತೃಪ್ತಿ ಕೆ.ಬಿ.ಅವರನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ಮತ್ತು ಬೆಳ್ತಂಗಡಿ ಸಂಚಾರ ಠಾಣೆಯ ಎಎಸ್‌ಐ ಪೌಲೋಸ್ ಸಿ.ಜೆ.ಅವರನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

ಸಂಬಂಧಪಟ್ಟ ಘಟಕ/ಠಾಣಾಧಿಕಾರಿಯವರು ಸ್ಥಳ ಬದಲಾವಣೆಯಲ್ಲಿರುವ ಎಎಸ್‌ಐ, ಹೆಚ್‌ಸಿ, ಪಿಸಿರವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಪ್ರಸಕ್ತ ನೇಮಿಸಲಾದ ಠಾಣೆಗಳಲ್ಲಿ ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸದೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿ ರಹದಾರಿ ಪತ್ರ ನೀಡಬೇಕು ಹಾಗೂ ಇವರು ಕರ್ತವ್ಯಕ್ಕೆ ಹಾಜರಾದ ಕೂಡಲೇ ಠಾಣಾಽಕಾರಿಗಳು ಕಚೇರಿಗೆ ಮಾಹಿತಿ ನೀಡುವಂತೆ ಎಸ್ಪಿಯವರು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here