ಪುತ್ತೂರು: ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿ ಕಲ್ಲಾರೆ ಹಾಗೂ ವಿಶ್ವಹಿಂದೂ ಪರಿಷದ್-ಮಾತೃ ಮಂಡಳಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.5ರಂದು ಕಲ್ಲಾರೆ ಶ್ರೀಗುರುರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭಗೊಳ್ಳಲಿರುವ ಪೂಜಾ ಕಾರ್ಯಕ್ರಮದಲ್ಲಿ ಕಲಶಪ್ರತಿಷ್ಢೆ, ಸಂಕಲ್ಪ, ಲಲಿತಾ ಸಹಸ್ರನಾಮ, ಬೊಳುವಾರು ತಿರುಪತಿ ತಿರುಮಲ ಟ್ರಸ್ಟ್ನಿಂದ ಭನೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತಪರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.