ಶೇ. 70 ರಷ್ಟು ಯುವಕರು ಗಾಂಜಾ ವ್ಯಸನಿಗಳು-ಜೆಡಿಎಸ್ ಪುತ್ತೂರು ಅಧ್ಯಕ್ಷ ಅಶ್ರಫ್ ಕಲ್ಲೇಗ ಸುದ್ದಿಗೋಷ್ಠಿ

0

  • ಪಕ್ಷಪಾತಿಯಾಗಿ ವರ್ತಿಸಿದ ಸಿಎಂ ನಾಲಾಯಕ್: ಆರೋಪ
  • ಮಸೂದ್, ಫಾಝಿಲ್ ಹತ್ಯೆ ಪ್ರಕರಣ ನ್ಯಾಯಾಧೀಶರ ತನಿಖೆಗೆ ಒತ್ತಾಯ

ಪುತ್ತೂರು: ತಾಲೂಕಿನಾಂದ್ಯಂತ ಅದರಲ್ಲೂ ಬೆಳ್ಳಾರೆ ಪರಿಸರದಲ್ಲಿ ಶೇ. 70ರಷ್ಟು ಮಂದಿ ಯುವಕರು ಗಾಂಜಾ ವ್ಯಸನಿಗಳಾಗಿದ್ದಾರೆ. ಇದರಿಂದ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ತಕ್ಷಣ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಎಂಎಲ್‌ಸಿಗಳು ಸೋಮವಾರ ಹತ್ಯೆಗೊಳಗಾದ ಮಸೂದ್, ಪ್ರವೀಣ್, ಫಾಝಿಲ್ ಅವರ ಮನೆಗಳಿಗೆ ಭೇಟಿ ನೀಡಿದ್ದಾರೆ. ಮಾತ್ರವಲ್ಲ, ಆ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಚೆಕ್ ಕೂಡ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಇತರ ಪಕ್ಷದ ಪ್ರಮುಖರು ಪ್ರವೀಣ್ ಮನೆಗೆ ಭೇಟಿ ನೀಡಿದಾಗ ಬಹಿಷ್ಕಾರ ಹಾಕಿ, ಧಿಕ್ಕಾರ ಕೂಗಿರುವುದನ್ನು ಗಮನಿಸಬಹುದು. ಆದರೆ ಕುಮಾರಸ್ವಾಮಿ ಅವರು ಭೇಟಿ ನೀಡಿದಾಗ, ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇದು ಅವರ ವೈಯಕ್ತಿಕ ವರ್ಚಸ್ಸನ್ನು ತೋರಿಸುತ್ತದೆ. ಇದೇ ಸಂದರ್ಭ ಮನೆಯವರು ಹಂತಕರ ವಿರುದ್ಧ ಕಠಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಸೂದ್ ಹಾಗೂ ಫಾಝಿಲ್ ಅವರನ್ನು ಹತ್ಯೆ ಮಾಡಿದವರ ವಿರುದ್ಧವೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಆಗ್ರಹಿಸಲಾಗುವುದು ಎಂದರು.

ನಾಲಾಯಕ್ ಸಿಎಂ: ಪ್ರವೀಣ್ ನೆಟ್ಟಾರು ಅವರ ಮನೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ೨೫ ಲಕ್ಷ ರೂ.ಗಳ ಪರಿಹಾರ ನೀಡಿರುವುದು ಅಭಿನಂದನೀಯ. ಇನ್ನೊಂದೆಡೆ ಹತ್ಯೆಯಾಗಿರುವ ಅಮಾಯಕ, ತಂದೆಯಿಲ್ಲದ ಅನಾಥನಾಗಿರುವ ಮಸೂದ್ ಅವರ ಕುಟುಂಬಕ್ಕೂ ಭೇಟಿ ನೀಡಬೇಕಾಗಿತ್ತು. ಅವರ ಮನೆಯವರಿಗೂ ಸಿಎಂ ಸಾಂತ್ವನ ಹೇಳಬೇಕಾಗಿತ್ತು. ಸರಕಾರದ ಪರಿಹಾರ ನೀಡಬೇಕಾಗಿತ್ತು. ನಾವೇನೂ ಬಿಜೆಪಿಯ ಪರಿಹಾರ ಕೇಳುತ್ತಿಲ್ಲ. ಹತ್ಯೆಗೊಳಗಾದ ಪ್ರವೀಣ್ ಅವರ ಮನೆಗೆ ಮಾತ್ರ ಭೇಟಿ ನೀಡುವ ಮೂಲಕ ಮುಖ್ಯಮಂತ್ರಿಗಳ ತಾರತಮ್ಯ ನೀತಿ, ಪಕ್ಷಪಾತಿ ಎನ್ನುವುದನ್ನು ಸೂಚಿಸುತ್ತದೆ. ಅವರೊಬ್ಬ ನಾಲಾಯಕ್ ಮುಖ್ಯಮಂತ್ರಿ ಎಂದು ಅಶ್ರಫ್ ಕಲ್ಲೇಗ ಹೇಳಿದರು.

ಅಲ್ಲದೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಉಂಟಾಗಲು ಮುಖ್ಯಮಂತ್ರಿಯೇ ಕಾರಣ ಎಂದ ಅಶ್ರಫ್ ಕಲ್ಲೇಗ, ಹಿಂದಿನ ಸಲ ಜಿಲ್ಲೆಗೆ ಭೇಟಿ ನೀಡಿದಾಗ ಆಕ್ಷನ್‌ಗೆ ತಕ್ಕ ರಿಯಾಕ್ಷನ್ ಎಂಬ ಹೇಳಿಕೆ ನೀಡಿದ್ದರು. ಇದರಿಂದಾಗಿಯೇ ಗಲಭೆ ಉಂಟಾಗಿದೆ ಎಂದು ಆರೋಪಿಸಿದರು.
ಬಿಜೆಪಿಯ ಒಳಜಗಳಕ್ಕೆ ಸಾಕ್ಷಿ: ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಅಂತಿಮ ನಮನದ ವೇಳೆ

ಯಲ್ಲಿ ಲಾಠಿಚಾರ್ಜ್ ನಡೆಯಿತು. ಈ ಲಾಠಿಚಾರ್ಜ್ ಮಾಡಿಸಿರುವುದೇ ಸಂಸದರು. ಅವರ ಕಾರನ್ನು ಪಲ್ಟಿ ಮಾಡಲು ಯತ್ನಿಸಿದ್ದಾರೆಂದು, ಲಾಠಿಚಾರ್ಜ್ ಮಾಡಿಸಿದರು. ಇದಕ್ಕಾಗಿ ಪೊಲೀಸರನ್ನು ವರ್ಗಾವಣೆ ಮಾಡಿಸಿರುವುದು ಎಷ್ಟು ಸರಿ? ಬಿಜೆಪಿ ಕಾರ್ಯಕರ್ತರು ಎಂದು ಪೊಲೀಸರು ಸುಮ್ಮನೆ ಕೂರಬೇಕೇ? ಇದು ಯಾವ ನ್ಯಾಯ? ಇದು ಬಿಜೆಪಿಗರ ಒಳಜಗಳವನ್ನು ತೋರಿಸುತ್ತದೆ ಎಂದು ಅಶ್ರಫ್ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಯುವ ಜನತಾದಳ ತಾಲೂಕು ಅಧ್ಯಕ್ಷ ಶಿವ ಸಾಲ್ಯಾನ್, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಪ್ರಭಾಕರ ಸಾಲ್ಯಾನ್, ಜೆಡಿಎಸ್ ಪುತ್ತೂರು ನಗರ ಅಧ್ಯಕ್ಷ ವಿಕ್ಟರ್ ಗೋನ್ಸಾಲ್ವಿಸ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here