ಪ್ರತಿಭೆಯ ಅನಾವರಣ ಆಗಲಿ-ಧನರಾಜ್ ಆಚಾರ್

0

ಪುತ್ತೂರು: ಸಮಾಜದಲ್ಲಿ ಎಲ್ಲರೂ ಪ್ರತಿಭಾನ್ವಿತರೇ ಆಗಿರುತ್ತಾರೆ. ಆದರೆ ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಯ ಅರಿವಿಲ್ಲದೆ ಹಿಂದೆಯೇ ಉಳಿದುಬಿಡುತ್ತಾರೆ.ಹಾಗಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ನಾವೇ ಗುರುತಿಸಿ ಕೊಳ್ಳಬೇಕು.ನಮ್ಮ ಸಾಮರ್ಥ್ಯ ದ ಅರಿವು ನಮಗಾಗಬೇಕು. ಈ‌ ಸಂದರ್ಭದಲ್ಲಿ ಹಲವರು ತಮ್ಮನ್ನು ತಾವು ಇತರರಿಗೆ ಹೋಲಿಸಿ ಕೊರಗುತ್ತಾರೆ.ಈ ರೀತಿಯಾಗಿ ಇತರಿಗೆ ಹೋಲಿಸಿಕೊಂಡು ನೊಂದುಕೊಳ್ಳುವ ಗುಣವನ್ನು ಮೊದಲು ಬಿಡುವುದು ಉತ್ತಮ. ನಮಗಿರುವ ಕೌಶಲ್ಯದ ಬಗೆಗೆ ತೃಪ್ತಿ ಪಟ್ಟುಕೊಳ್ಳಬೇಕೆ ವಿನಃ ಇಲ್ಲದಿರುವುದನ್ನು ನೆನೆದು ನೊಂದುಕೊಳ್ಳವುದಲ್ಲ ಎಂದು ರಂಗಭೂಮಿ ನಟ ಧನರಾಜ್ ಆಚಅವರು ಹೇಳಿದರು.

 

ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಲ್ಲಿ ವಿಜ್ಞಾನ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಆಯೋಜಿಸಲಾದ ಅಂತರ್ ತರಗತಿ ಫೆಸ್್ಟ ಕಾರ್ಯಕ್ರಮದ ಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಎಲ್ಲರೂ ಒಂದೇ ರೀತಿ ಇರಲಾರರು.ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ.ಹಾಗಿರುವಾಗ ಇತರರ ಬಗ್ಗೆ ಯೋಚಿಸಿ ಇಂದಿನ ದಿನದ ನೆಮ್ಮದಿಯನ್ನು ಕಳೆದುಕೊಳ್ಳುವುದು ಸರಿಯಲ್ಲ. ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಹಾಗಿರುವಾಗ ಅವಕಾಶ ಸಿಕ್ಕಾಗ ಇತರರ ಬಗ್ಗೆ ಚಿಂತಿಸಿಕೊಂಡು ಕೂತರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಆದ್ದರಿಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ಮನುಷ್ಯನಾದವನು ತಾನು ನಕ್ಕು ಪರರನ್ನು ನಗಿಸ್ತಾ ಇರಬೇಕು.ನಗುವಿನಿಂದ ಆರೋಗ್ಯ ವೃದ್ಧಿ ಯಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲರೂ ನಗುವಿನಿಂದ ದೂರವಾಗುತ್ತಿದ್ದಾರೆ. ತಮ್ಮಲ್ಲಿರುವ ಸಾಮರ್ಥ್ಯ ವನ್ನು ಬಳಸಿಕೊಂಡು ಉತ್ತಮ ಭವಿಷ್ಯದ ನಿರ್ಮಾಣಕ್ಕೆ‌ಪ್ರಯತ್ನ ಪಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ.ಎಸ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ನಿಶಾ ಎನ್‌ ಸ್ವಾಗತಿಸಿ, ಭಾರ್ಗವ ಶೆಟ್ಟಿ ವಂದಿಸಿದರು.ನಿಶಿತಾ ಪ್ರಕಾಶ್ ನಿರೂಪಿಸಿದರು.

LEAVE A REPLY

Please enter your comment!
Please enter your name here