ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಿಶಿಷ್ಠ ಸಾಧನೆಗೆ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿ

0

ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಿಶೇಷ ಸಾಧನೆಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾಗಿದೆ. ಆ.5ರಂದು ನಡೆಯುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2021-22 ನೇ ಸಾಲಿನ ಮಹಾಸಭೆಯಲ್ಲಿ ಪ್ರಸಸ್ತಿ ಪ್ರದಾನ ನಡೆಯಲಿದೆ.

ಪುತ್ತೂರು ತಾಲೂಕಿನಲ್ಲಿ ಒಟ್ಟು 5  ಮೂರ್ತೆದಾರರ ಸೇವಾ ಸಹಕಾರಿ ಸಂಘಗಳು ವ್ಯವಹರಿಸುತ್ತಿದ್ದು ಅವುಗಳಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘವು ಒಂದು. ಕರ್ನಾಟಕ ಸರಕಾರ 1991 ರಲ್ಲಿ ಆದೇಶ ನೀಡಿ ‘ಮೂರುವವನೇ ಮಾರುವವ ‘ಎಂಬ ಕಾನೂನನ್ನು ಜಾರಿಗೆ ತಂದು ಅದರಂತೆ ಆಗಿನ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದಿಂದ ಬಿಳಿನೆಲೆವರೆಗಿನ 16  ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಆಲಂಕಾರಿನಲ್ಲಿ 1991 ರಲ್ಲಿ ಸ್ಥಾಪನೆಗೊಂಡು 2005 ರಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಿತು.

ಸಂಘವು ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಸ್ಥಾನ ಹೊಂದಿದೆ. ಪ್ರಸ್ತುತ ಸಾಲಿನಲ್ಲಿ ಸಂಘದಲ್ಲಿ 6514  ಸದಸ್ಯರಿದ್ದು 27,04,435ರೂಪಾಯಿ ಬಂಡವಾಳ ಹೊಂದಿದೆ. ಸಹಕಾರಿ ಸಂಘವು 18.97  ಕೋಟಿ ರೂ.ಠೇವಣಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಎನ್. ಮುತ್ತಪ್ಪ ಪೂಜಾರಿ ನೆಯ್ಯಲ್ಗ ತಿಳಿಸಿದ್ದಾರೆ.

ಸಂಘದ ಕಾರ್ಯವ್ಯಾಪ್ತಿ: ಸಂಘವು ಕೊಯಿಲ, ರಾಮಕುಂಜ, ಆಲಂಕಾರು, ಹಳೆನೇರೆಂಕಿ, ಕುಂತೂರು, ಪೆರಾಬೆ, ಕಡಬ, ಬಲ್ಯ, ಕುಟ್ರುಪ್ಪಾಡಿ, ರೆಂಜಿಲಾಡಿ, ಕೋಡಿಂಬಾಳ, 102 ನೆಕ್ಕಿಲಾಡಿ, ನೂಜಿಬಾಳ್ತಿಲ, ಬಂಟ್ರ, ಐತ್ತೂರು, ಬಿಳಿನೆಲೆ ಒಟ್ಟು 16  ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್ ವ್ಯವಸ್ಥೆ , ಇ-ಸ್ಟ್ಯಾಂಪಿಂಗ್ ಇದ್ದು ಸದಸ್ಯರಿಗೆ ವಿವಿಧ ಬಗೆಯ ಸೌಲಭ್ಯವನ್ನು ಒದಗಿಸುತ್ತದೆ. ಸಂಘ ಅಭಿವೃದ್ದಿಗಾಗಿ 11  ಮಂದಿ ಚುನಾಯಿತ ಆಡಳಿತ ಮಂಡಳಿ ಇದೆ. ಅಧ್ಯಕ್ಷರಾಗಿ ನೈಯ್ಯಲ್ಗ ಮುತ್ತಪ್ಪ ಪೂಜಾರಿ, ಉಪಾಧ್ಯಕ್ಷರಾಗಿ ವಸಂತ ಪೂಜಾರಿ ಬದಿಬಾಗಿಲು, ನಿರ್ದೇಶಕರಾಗಿ ಚಂದ್ರಶೇಖರ ಆಲಂಕಾರು, ಜಯಕರ ಪೂಜಾರಿ ಕಲ್ಲೇರಿ, ಗಂಗಾರತ್ನ ವಸಂತ್ ಅಗತ್ತಾಡಿ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಜಿನ್ನಪ್ಪ ಸಾಲ್ಯಾನ್ ಕಡಬ, ಸಂತೋಷ್ ಕುಮಾರ್ ಮತ್ರಾಡಿ, ಜಯಂತ ಪೂಜಾರಿ ನೆಕ್ಕಿಲಾಡಿ, ಮಂಜುಳಾ ಚಂದ್ರಶೇಖರ ಕಲ್ಲೇರಿ, ಜಯಪ್ರಕಾಶ್ ದೋಳ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಲಿಂಗಪ್ಪ ಪೂಜಾರಿ ನೆಯ್ಯಲ್ಗ ಕಾರ್ಯನಿರ್ವಹಿಸುತ್ತಿದ್ದು, ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಯೋಗೀಶ್ ಕುಮಾರ್ ಅಗತ್ತಾಡಿ ಹಾಗೂ ಸಂಘದ ಎಲ್ಲಾ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು, ಸಿಬ್ಬಂದಿಗಳು ಸಂಘದ ಶ್ರೇಯೋಭಿವೃದ್ದಿಗೆ ಕಾರಣರಾಗಿರುತ್ತಾರೆ ಎಂದು ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here