ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅತ್ಯುತ್ತಮ ಸಾಧನೆಗೆ ಪ್ರಥಮ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆ

0

  • ಆ. 5ಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ

ಪುತ್ತೂರು: ಪುತ್ತೂರು ಕಡಬ ಸೇರಿ ಒಟ್ಟು 7  ಶಾಖೆಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪುತ್ತೂರು ಇದರ ವಿಶೇಷ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಪ್ರಶಸ್ತಿಗೆ ಪ್ರಥಮ ಬರಿಗೆ ಅಯ್ಕೆಯಾಗಿರುತ್ತದೆ. ಆ.5ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಮಹಾಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

 

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಅಡಿಟ್ ವರ್ಗಿಕರಣದಲ್ಲಿ ಸತತ 7  ವರ್ಷದಿಂದ ‘ಎ’ ತರಗತಿ ಪಡೆದಿದ್ದು, ಪ್ರಸ್ತುತ ಸಾಲಿಗೆ 6 ಸಾವಿರಕ್ಕಿಂತ ಮೇಲ್ಪಟ್ಟು ಸದಸ್ಯರನ್ನು ಹೊಂದಿದ್ದು, ರೂ. 3  ಕೋಟಿ 24 ಲಕ್ಷ ಪಾಲು ಬಂಡವಾಳವನ್ನು ಹೊಂದಿರುತ್ತದೆ. 2021-22ರ ಅವಧಿಯಲ್ಲಿ 291 ಕೋಟಿಗಿಂತಲೂ ಅಧಿಕ ವ್ಯವಹಾರವನ್ನು ಮಾಡಿ ರೂ 84, 36,274 ಲಾಭಾಂಶವನ್ನು ಪಡೆದು 12 % ಡಿವಿಡೆಂಟ್ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಒಕ್ಕಲಿಗ ಗೌಡ ಸೇವಾ ಸಂಘ ರಿ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ 2002 ರಲ್ಲಿ ಡಿ. ವಿ ಸದಾನಂದ ಗೌಡರು ಶಾಸಕರಾಗಿದ್ದಾಗ ಅವರ ಸಲಹೆಯಂತೆ ಇಡ್ಯಡ್ಕ ಮೋಹನ ಗೌಡರ ಸಾರಥ್ಯದಲ್ಲಿ 20 ಮಂದಿ ಪ್ರವರ್ತಕರ ಮೂಲಕ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ದಿ| ಜಗನ್ನಾಥ ಬೊಮ್ಮೆಟ್ಟಿಯವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡು, ಇದೀಗ ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಕಟ್ಟಡದಲ್ಲಿ ತನ್ನ ಕೇಂದ್ರ ಕಚೇರಿ ಮತ್ತು ಪುತ್ತೂರು ಶಾಖೆಯ ಸ್ವಂತ ಕಟ್ಟಡವನ್ನು ಹೊಂದಿದ್ದು, ಪುತ್ತೂರು ನಗರದಲ್ಲಿ 2 ಶಾಖೆ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಅಲಂಕಾರು ಹೀಗೆ 7 ಶಾಖೆಗಳನ್ನು ಹೊಂದಿರುತ್ತದೆ. ಸಂಘದ ಅಭಿವೃದ್ಧಿಗೆ ಪೂರಕವಾಗಿ 12 ಮಂದಿ ನಿರ್ದೇಶಕರಿದ್ದು ಅಧ್ಯಕ್ಷರಾಗಿ ಚಿದಾನಂದ ಬೈಲಾಡಿ, ಉಪಾಧ್ಯಕ್ಷರಾಗಿ ಯು ಪಿ ರಾಮಕೃಷ್ಣ, ನಿರ್ದೆಶಕರಾಗಿ ಮೋಹನಗೌಡ ಇಡ್ಯಡ್ಕ, ರಾಮಕೃಷ್ಣ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೋಡಿಂಬಾಳ, ಸಂಜೀವ ಗೌಡ ಕುದ್ಲೂರು, ಸತೀಶ ಪಾಂಬಾರು, ಪ್ರವೀಣ್ ಕುಂಟ್ಯಾಣ, ಲೋಕೇಶ್ ಸಿ ಯೆಚ್, ಸುಪ್ರಿತಾ ರವಿಚಂದ್ರ, ತೇಜಸ್ವಿನಿ ಶೇಖರ ಗೌಡ, ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀಧರ ಗೌಡ ಕಣಜಾಲು, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಸುಧಾಕರ ಕೆ ಮತ್ತು ಎಲ್ಲಾ ಶಾಖಾ ಪ್ರಬಂಧಕರು ಹಾಗು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾ ಇದ್ದಾರೆ.

ಪ್ರಥಮ ಬಾರಿಗೆ ಉತ್ತಮ ಸಾಧನೆಗಾಗಿ ಪ್ರಶಸ್ತಿ ಪಡೆದುಕೊಳುತ್ತಿರುವುದು ಅತೀವ ಸಂತೋಷವಾಗಿದೆ. ಆಡಳಿತ ಮಂಡಳಿಯ ಪ್ರಮಾಣಿಕ ಪ್ರಯತ್ನ, ಸಲಹಾ ಸಮಿತಿಗಳ ಪೂರ್ಣ ಪ್ರಮಾಣದ ಸಲಹೆ ಮತ್ತು ಎಲ್ಲಾ ಸಿಬ್ಬಂದಿಗಳ ನಿಸ್ವಾರ್ಥ ಸೇವೆ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಈ ಎಲ್ಲಾ ಸಾಧನೆಗೆ ಶಾಸಕ ಸಂಜೀವ ಮಠಂದೂರು ಮತ್ತು ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು ಅವರ ಸೂಕ್ತ ಪ್ರೋತ್ಸಾಹ, ಸಲಹೆ, ಮಾರ್ಗದರ್ಶನ ಕಾರಣವಾಗಿದೆ.ಚಿದಾನಂದ ಬೈಲಾಡಿ, ಅಧ್ಯಕ್ಷರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು

LEAVE A REPLY

Please enter your comment!
Please enter your name here