ಜಿ.ಎಲ್. ಜ್ಯುವೆಲ್ಲರ್‍ಸ್ `ಆಟಿ ಸೇಲ್’ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

0

ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ನಡೆಯುತ್ತಿರುವ ವಿಶೇಷ ‘ಆಟಿ ಸೇಲ್’ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವರ್ಣೋದ್ಯಮದಲ್ಲಿ 65  ವರ್ಷಗಳಿಂದ ಜನಮನ ಗೆದ್ದು, ಚಿನ್ನಾಭರಣಪ್ರಿಯರ ಮನೆಮಾತಾಗಿ ಕರಾವಳಿ, ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‍ಸ್ ಪುತ್ತೂರು ಹಾಗೂ ಸುಳ್ಯದ ಚಿನ್ನಾಭರಣ ಮಳಿಗೆಗಳಲ್ಲಿ ಆ. 6ರವರೆಗೆ ‘ಆಟಿ ಸೇಲ್’ ಆಯೋಜಿಸಲಾಗಿದೆ. ಪುತ್ತೂರು ನೂತನ ಮಳಿಗೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಸುಳ್ಯ ಮಳಿಗೆಯ ಹತ್ತನೇ ವಾರ್ಷಿಕೋತ್ಸವ ಪ್ರಯುಕ್ತ ನಡೆಯುವ ಈ ‘ಆಟಿ ಸೇಲ್’ ಕೊಡುಗೆಯಾಗಿ ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ ರೂ. 100/- ರವರೆಗೆ ರಿಯಾಯಿತಿ, ವಜ್ರಾಭರಣಗಳ ಪ್ರತೀ ಕ್ಯಾರೆಟ್ ಮೇಲೆ ರೂ. 5,000/-ದವರೆಗೆ ರಿಯಾಯಿತಿ, ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕಿಲೋ ಗ್ರಾಂ ಗೆ ರೂ. 2,000/- ರಿಯಾಯಿತಿ ಇದೆ.

LEAVE A REPLY

Please enter your comment!
Please enter your name here