ಕೊಯಿಲ: ಜಾನುವಾರು ಸಾಗಾಟ ಆರೋಪ, ಇಬ್ಬರ ಬಂಧನ

0

ರಾಮಕುಂಜ: ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಪಿಕಪ್ ವಾಹನವೊಂದರಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿರುವ ಕಡಬ ಪೊಲೀಸರು ಇಬ್ಬರನ್ನು ಬಂಽಸಿ ಜಾನುವಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಉಪ್ಪಿನಂಗಡಿ ಕರಾಯ ನಿವಾಸಿ ನಜೀರ್ ಹಾಗೂ ರತ್ನಾಕರ ಬಂಽತ ಆರೋಪಿಗಳಾಗಿದ್ದಾರೆ. ಆ.3ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ಕೊಯಿಲದಿಂದ ಗಂಡಿಬಾಗಿಲು ಮೂಲಕ ಹಿರೇಬಂಡಾಡಿ ಕಡೆಗೆ ಹೋಗುತ್ತಿದ್ದ ಪಿಕಪ್ (ಕೆಎ 20, ಬಿ 3993) ವಾಹನವನ್ನು ಕೊಯಿಲ ಗ್ರಾಮದ ಗಂಡಿಬಾಗಿಲು ಆನೆಗುಂಡಿ ಎಂಬಲ್ಲಿ ನಿಲ್ಲಿಸುವಂತೆ ಗಸ್ತು ನಿರತ ಕಡಬ ಎಸ್.ಐ.ಆಂಜನೇಯ ರೆಡ್ಡಿ ಹಾಗೂ ಪೊಲೀಸರು ಸೂಚನೆ ನೀಡಿದ್ದರೂ ಅದರ ಚಾಲಕ ನಜೀರ್ ಎಂಬಾತ ಪಿಕಪ್ ವಾಹನವನ್ನು ನಿಲ್ಲಿಸದೇ ಮುಂದೆ ಚಲಾಯಿಸಿಕೊಂಡು ಹೋಗಿದ್ದು ನಂತರ ಪೊಲೀಸರು ಬೆನ್ನಟ್ಟಿ ಹೋಗಿ ಪಿಕಪ್ ವಾಹನ ನಿಲ್ಲಿಸಿದ್ದರು. ಇದರಲ್ಲಿ ಒಂದು ಜಾನುವಾರನ್ನು ಯಾವುದೇ ಸಂರಕ್ಷಣೆ ಮಾಡದೆ ಹತ್ಯೆ ಮಾಡುವ ಸಲುವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿ ಜಾನುವಾರು ಹಾಗೂ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳ ವಿರುದ್ಧ ಕಲಂ: 4.5.12 ಕರ್ನಾಟಕ ಜಾನುವಾರು ಹತ್ಯೆ ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ:66(1), 192(ಂ) ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ 1988ರಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here