ಸ್ನೇಹ ಸಿಲ್ಕ್‌ನಲ್ಲಿದೆ ಗ್ರಾಹಕ ಸ್ನೇಹಿ ದರ…!

ಆಷಾಡ ಸೇಲ್‌ನಲ್ಲಿ ಗ್ರಾಹಕರಿಗಿದೆ ಭರ್ಜರಿ ಡಿಸ್ಕೌಂಟ್

* ಬ್ರಾಂಡೆಡ್ ಕಂಪನಿಯ ಡ್ರೆಸ್‌ಗಳಿಗೂ ಡಿಸ್ಕೌಂಟ್
* ನವನೀನ ಮಾದರಿಯ ಹೊಸ ಹೊಸ ಸಂಗ್ರಹ
* ಅತೀ ಕಡಿಮೆ ದರ
* ವಿಶಾಲ ಮಳಿಗೆ, ವಿಪುಲ ಆಯ್ಕೆ


ಪುತ್ತೂರು: ನೀವು ಡ್ರೆಸ್ ಖರೀದಿಸಬೇಕೆಂದಿದ್ದೀರಾ…? ಹಾಗಾದರೆ ಒಮ್ಮೆ ಬೊಳುವಾರಿನ ಸ್ನೇಹ ಸಿಲ್ಕ್ಸ್& ರೆಡಿಮೇಡ್ಸ್‌ಗೆ ಬನ್ನಿ…! ಆಷಾಡ ಮಾಸದ ಭರ್ಜರಿ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದ್ದು, ಇಲ್ಲಿದೆ ಗ್ರಾಹಕರನ್ನು ಮನಸೂರೆಗೊಳಿಸುವ ವಿವಿಧ ವೆರೈಟಿ, ವಿನ್ಯಾಸದ ಉಡುಪುಗಳು ಅತೀ ಕಡಿಮೆ ದರದಲ್ಲಿ ನಿಮ್ಮ ಕೈಸೇರಲಿದೆ.

ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಲ್ಲಿರುವ ಸ್ನೇಹ ಸಿಲ್ಕ್ಸ್ & ರೆಡೆಮೇಡ್ಸ್ ಉಡುಪುಗಳ ಖರೀದಿಗೆ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಷಾಡ ಮಾಸದ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಪ್ರಾರಂಭಿಸಿದ್ದು ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳ ಖರೀದಿಗೆ ಇದು ಸಕಾಲವಾಗಿದೆ. ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ವಿಶೇಷ ರಿಯಾಯಿತಿಯಿದೆ. ಪುರುಷರ ಹೊಸ ಹೊಸ ಶೈಲಿ, ವಿನ್ಯಾಸದ ಶರ್ಟ್‌ಗಳು ಹೊಲಿಗೆಯ ದರಕ್ಕಿಂತಲೂ ಕಡಿಮೆ ದರದಲ್ಲಿ ಲಭ್ಯವಿದೆ. ರವಿಕೆ ಸಹಿತ ಫ್ಯಾನ್ಸಿ ಸಾರಿಗಳು ಕೇವಲ ರೂ.199ರ ದರದಲ್ಲಿ ನಿಮ್ಮ ಕೈಸೇರಲಿದೆ. ಆಷಾಡ ವಿಶೇಷ ರಿಯಾಯಿತಿ ದರದ ಮಾರಾಟವು ಮಳಿಗೆಯಲ್ಲಿರುವ ಎಲ್ಲಾ ರೀತಿಯ ಉಡುಪುಗಳನ್ನು ಖರೀದಿಸಬಹುದಾಗಿದ್ದು ಜಾಕಿ, ವಿಐಪಿ, ರಾಮ್‌ರಾಜ್, ವ್ಯಾನಿಸನ್, ಟೈಬರ್ ಮೊದಲಾದ ಹೆಸರಾಂತ ಕಂಪನಿಗಳ ಉಡುಪುಗಳೂ ವಿಶೇಷ ರಿಯಾಯಿತಿ ದರದಲ್ಲಿ ಖರೀದಿಸಲು ಗ್ರಾಹಕರಿಗೆ ಸುವರ್ಣಾವಕಾಶವಿದೆ. ಎಲ್ಲಾ ತರದ ಉಡುಪುಗಳಲ್ಲಿ ಪ್ರತಿ ದಿನ ಹೊಸ ಹೊಸ ಸಂಗ್ರಹಗಳಿದೆ. ಹೀಗಾಗಿ ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳ ಖರೀದಿಗೆ ವಿಪುಲ ಅವಕಾಶವಿದೆ.

ಭರ್ಜರಿ ಡಿಸ್ಕೌಂಟ್…!

ಬ್ರಾಂಡೆಡ್ ಸಹಿತ ಎಲ್ಲಾ ಉಡುಪುಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗುತ್ತಿದ್ದು ಅತೀ ಕಡಿಮೆ ದರದಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ರೂ.130ರಿಂದ165 ದರದಲ್ಲಿ ಟೀ-ಶರ್ಟ್‌ಗಳು, ರೂ.325ಕ್ಕೆ ಕ್ಯಾಜುವಲ್ ಶರ್ಟ್‌ಗಳು, ರೂ.230ಕ್ಕೆ ಪ್ರಿಂಟ್ ಹಾಗೂ ಇನ್ನಿತರ ಶರ್ಟ್‌ಗಳು, ರೂ.100ಕ್ಕೆ ತ್ರಿಫೋರ್ತ್ ಚಡ್ಡಿ, ರೂ.85ಕ್ಕೆ ಬರ್ಮುಡ ಚಡ್ಡಿ, ರೂ.130ಕ್ಕೆ ಸ್ಪೋರ್ಟ್ಸ್ ಚಡ್ಡಿಗಳು, ರೂ.80ಕ್ಕೆ ಎರಡು ಬಾತ್ ಟವೆಲ್, ರೂ.165ಕ್ಕೆ ಬೆಡ್‌ಶೀಟ್, ಸೀರೆಗಳು ರೂ.199 ದರದಲ್ಲಿ ಪ್ರಾರಂಭಗೊಳ್ಳಲಿದೆ. ರೂ.250ಕ್ಕೆ ಫ್ಯಾನ್ಸಿ ಕಾಟನ್ ಸೀರೆಗಳು, ರೂ.199ಕ್ಕೆ ರವಿಕೆ ಸಹಿತ ಸೀರೆಗಳು, ರೂ.350ರ ಸೀರೆಗಳು, ರೂ.200ಕ್ಕೆ ನೈಟಿಗಳು, ರೂ.160ಕ್ಕೆ ಎರಡು ಸ್ಲಿಪ್, ರೂ.180ಕ್ಕೆ ಎರಡು ಪ್ಯಾಂಟೀಸ್, ರೂ.130ಕ್ಕೆ ಲೆಗ್ಗಿನ್ಸ್, ರೂ.195ಕ್ಕೆ ಕುರ್ತಿಸ್ ಸೇರಿದಂತೆ ಎಲ್ಲಾ ರೀತಿಯ ಮಕ್ಕಳ ಉಡುಪುಗಳನ್ನು ಅತೀ ಕಡಿಮೆ ದರದಲ್ಲಿ ಖರೀದಿಸಬಹುದಾದ ಸದಾವಕಾಶವಿದೆ.

ವಿಶಾಲ ಮಳಿಗೆ, ವಿಪುಲ ಆಯ್ಕೆ:

ಜವುಳಿ ಉದ್ಯಮದಲ್ಲಿ ಸುದೀರ್ಘ ವರ್ಷಗಳ ಅನುಭವಗಳೊಂದಿಗೆ ಬೊಳುವಾರಿನಲ್ಲಿ ಪ್ರಾರಂಭಗೊಂಡಿರುವ ಸ್ನೇಹಾ ಸಿಲ್ಕ್ಸ್&ರೆಡಿಮೇಡ್ಸ್ ಮಳಿಗೆಯು ಗ್ರಾಹಕರ ಮನಗೆದ್ದಿದೆ. ಮೂರು ಅಂತಸ್ಥಿನ ವಿಶಾಲ ಮಳಿಗೆಯು ಸಂಪೂರ್ಣ ಹವಾನಿಯಂತ್ರಿತ ಮಳಿಗೆಯಾಗಿದೆ. ನೆಲಮಹಡಿಯಲ್ಲಿ ಮಕ್ಕಳ ಉಡುಪುಗಳು, ಪ್ರಥಮ ಮಹಡಿಯಲ್ಲಿ ಸೀರೆಗಳು, ಮದುವೆಯ ಉಡುಪುಗಳು ಸೇರಿದಂತೆ ಮಹಿಳೆಯರ ಎಲ್ಲಾ ರೀತಿಯ ಉಡುಪುಗಳು, ಎರಡನೇ ಮಹಡಿಯಲ್ಲಿ ಪುರುಷರ ಎಲ್ಲಾ ರೀತಿಯ ಉಡುಪುಗಳ ಪ್ರತ್ಯೇಕ ಪ್ರತ್ಯೇಕ ವಿಭಾಗಗಳನ್ನು ಹೊಂದಿರುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ವಾಹನ ಪಾರ್ಕಿಂಗ್ ಹಾಗೂ ಲಿಫ್ಟ್ ಸೌಲಭ್ಯಗಳನ್ನು ಒಳಗೊಂಡಿದೆ.

ಕ್ಲಿಯರೆನ್ಸ್ ಅಲ್ಲ… ಹೊಸ ಸಂಗ್ರಹ:

ಆಷಾಡ ಮಾಸದ ವಿಶೇಷ ರಿಯಾಯಿತಿ ದರದ ಮಾರಾಟದಲ್ಲಿ ಪ್ರತಿದಿನ ಹೊಸ ಹೊಸ ಜವುಳಿಗಳ ಸಂಗ್ರಹವಿದೆ. ಎಲ್ಲಾ ರೀತಿಯ ಉಡುಪುಗಳು ಉನ್ನತ ಗುಣಮಟ್ಟಗಳಿಂದ ಕೂಡಿದೆ. ಆಷಾಡ ಡಿಸ್ಕೌಂಟ್ ಸೇಲ್ ಯಾವುದೇ ಕಾರಣಕ್ಕೂ ಕ್ಲಿಯರೆನ್ಸ್ ಸೇಲ್ ಅಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.