ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣ ; ಸಿಬಿಐ ವಿಶೇಷ ಅಭಿಯೋಜಕರಾಗಿ ಎಂ.ಗಂಗಾಧರ ಶೆಟ್ಟಿ

0

ಪುತ್ತೂರು:ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ಅಭಿಯೋಜಕರಾಗಿ ವಿಟ್ಲ ಮೂಲದ ವಕೀಲ ಎಂ.ಗಂಗಾಧರ ಶೆಟ್ಟಿಯವರನ್ನು ನೇಮಕ ಮಾಡಿ ಸಿಬಿಐ ಆದೇಶಿಸಿದೆ. 2016ರಲ್ಲಿ ಜಿಮ್‌ವೊಂದರಲ್ಲಿ ನಡೆದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಾರೆ.

ಕುದ್ರೆಪ್ಪಾಡಿ ಮಂಜಪ್ಪ ಶೆಟ್ಟಿ ಹೊಸಮನೆ ಮತ್ತು ಮಿತ್ತಳಿಕೆ ಸುಶೀಲ ಯಂ.ಶೆಟ್ಟಿಯವರ ಪುತ್ರ ಗಂಗಾಧರ ಶೆಟ್ಟಿಯವರು ಶಿರಿಯ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣ ಹಾಗೂ ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿದ್ದ ಮಿತ್ತಳಿಕೆ ದಿ.ವಿಠಲ ಶೆಟ್ಟಿಯವರ ಜೊತೆ ಜೂನಿಯರ್ ವಕೀಲರಾಗಿ ವೃತ್ತಿಗೆ ಸೇರಿದ್ದ ಗಂಗಾಧರ ಶೆಟ್ಟಿಯವರು ಕಳೆದ ೨೦ ವರ್ಷಗಳಿಂದ ‘ವಿಠಲ್ ಶೆಟ್ಟಿ ಅಸೋಸಿಯೇಟ್ಸ್’ ಹೆಸರಿನಲ್ಲಿ ಕಛೇರಿ ಹೊಂದಿದ್ದಾರೆ.೨೦೦೯ರಿಂದ ೨೦೧೨ರವರೆಗೆ ತ್ವರಿತಪಥ ನ್ಯಾಯಾಲಯದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಅನುಭವ ಹೊಂದಿರುವ ಇವರು ಹಲವಾರು ಕ್ಲಿಷ್ಟಕರ ಕ್ರಿಮಿನಲ್ ಪ್ರಕರಣಗಳಲ್ಲಿ ವಾದಿಸುತ್ತಿದ್ದಾರೆ.ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕೆಲವು ಆರೋಪಿಗಳ ಪರ ಇವರು ವಾದಿಸುತ್ತಿದ್ದಾರೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ ಕೂಡ ವಿಶೇಷ ಸರಕಾರಿ ಅಭಿಯೋಜಕರಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here