ಆದ್ಯತೆಯ ಮೇಲೆ ಕೆಲಸ ನಿರ್ವಹಿಸಿ, ಶನಿವಾರ, ಆದಿತ್ಯವಾರ ರಜೆ ಮಾಡದೆ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ – ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸೂಚನೆ

0

  • ಭಾರೀ ಮಳೆಯಿಂದ ಹಾನಿಗೀಡಾದ ಸುಬ್ರಹ್ಮಣ್ಯ ಸಹಿತ ಸುಳ್ಯದ ವಿವಿಧ ಪ್ರದೇಶಗಳ ಪರಿಸ್ಥಿತಿ ವೀಕ್ಷಣೆ
  • ಶನಿವಾರದ ಒಳಗೆ ಲಘು ವಾಹನ ಸಂಚರಿಸುವಂತೆ ಮಾಡಿ
  • ಆರ್.ಟಿ.ಸಿ ಇಲ್ಲದಿದ್ದರೂ ಕೃಷಿ ನಾಶವಾಗಿದ್ದರೆ ಸಮೀಕ್ಷೆ ನಡೆಸಿ ವರದಿ ನೀಡಿ
  • ರಸ್ತೆ,ವಿದ್ಯುತ್,ನೆಟ್‌ವರ್ಕ್‌ಗೆ ತಕ್ಷಣ ಕ್ರಮ ಕೈಗೊಳ್ಳಿ

ಪುತ್ತೂರು:ತಾಲೂಕಿನ ಎಲ್ಲಾ ಅಧಿಕಾರಿಗಳು ಆದ್ಯತೆಯ ಮೇಲೆ ಕೆಲಸ ನಿರ್ವಹಿಸಬೇಕು.ಶನಿವಾರ-ಆದಿತ್ಯವಾರ ರಜೆ ಮಾಡದೇ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ಶನಿವಾರದ ಒಳಗೆ ಲಘು ವಾಹನ ಹೋಗುವಂತೆ ಸಂಪರ್ಕ ಕಲ್ಪಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಕಡಬ ತಾಲೂಕಿನ ಸುಬ್ರಹ್ಮಣ್ಯ ಸೇರಿದಂತೆ ಪ್ರಕೃತಿ ದುರಂತ ನಡೆದ ಸುಳ್ಯ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಳಿಕ ಸುಳ್ಯದ ತಾಲೂಕು ಪಂಚಾಯತ್‌ನಲ್ಲಿ ಅಽಕಾರಿಗಳ ಸಭೆ ನಡೆಸಿದರು.

ಆರ್‌ಟಿಸಿ ಇಲ್ಲದೇ ಇದ್ದರೂ ಕೃಷಿಯಿದ್ದರೆ ಪರಿಹಾರ ನೀಡಿ: ಆರ್.ಟಿ.ಸಿ.ಇಲ್ಲದೇ ಕೃಷಿ ಮಾಡಿಕೊಂಡಿದ್ದರೂ ಸಮೀಕ್ಷೆ ನಡೆಸಿ ವರದಿ ನೀಡಿ.ಆದಷ್ಟು ಕ್ಷಿಪ್ರಗತಿಯಲ್ಲಿ ಪರಿಹಾರ ಕಾರ್ಯ ಮಾಡಿ.ರಸ್ತೆ ಸಂಪರ್ಕ, ವಿದ್ಯುತ್ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಿ.ನಾವು ಭೇಟಿ ನೀಡಿದಾಗಲೂ ಗ್ರಾಮಸ್ಥರಿಂದ ಈ ಬಗ್ಗೆ ಬೇಡಿಕೆ ಕೇಳಿ ಬಂತು.ಪರಿಸ್ಥಿತಿಯನ್ನು ನಾವು ಅವಲೋಕಿಸಿದ್ದೇವೆ.ಯಾವುದೇ ಕಾರಣಕ್ಕೂ ತಡಮಾಡಬೇಡಿ ಎಂದು ಸಚಿವರು ಸೂಚಿಸಿದರು.

ಸೇತುವೆಗಳಲ್ಲಿ ಬಂದು ನಿಂತ ಮರಗಳನ್ನು ಆದಷ್ಟು ಬೇಗ ತೆಗೆಯಲು ಎಲ್ಲಾ ವ್ಯವಸ್ಥೆ ಮಾಡುವಂತೆ ಹಾಗೂ ರಸ್ತೆಗಳ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಅರಣ್ಯಾಽಕಾರಿಗಳಿಗೆ ಸೂಚಿಸಿದ ಸಚಿವರು ಶಾಲೆ,ವಿದ್ಯಾರ್ಥಿಗಳು,ಜಾನುವಾರು ಹೀಗೆ ಎಲ್ಲಾ ವಿಚಾರಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದರು.

ದುರಂತ ಸಂಭವಿಸಿದ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ ಪರಿಹಾರಕ್ಕಾಗಿ ಹಣ ನೀಡಿ ಎಂದು ದ.ಕ.ಜಿಲ್ಲಾಽಕಾರಿಗಳಿಗೆ ಸಚಿವರು ಸೂಚಿಸಿದರು. ಅದರಂತೆ ಗ್ರಾ.ಪಂ.ಗೆ ರೂ.1 ಲಕ್ಷ ಹಣ ನೀಡುವ ಬಗ್ಗೆ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಂಡರು.

ಸಣ್ಣ ಸಣ್ಣ ಕಾರಣಗಳನ್ನು ಮುಂದಿಟ್ಟು ಪರಿಹಾರ ಸಿಗದಂತೆ ಮಾಡಬೇಡಿ. ಆದ್ಯತೆಯಲ್ಲಿ ಕೆಲಸ ಮಾಡಿ ಎಂದು ಜಿಲ್ಲಾಽಕಾರಿ ಡಾ.ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚಿಸಿದರು.

ವೇದಿಕೆಯಲ್ಲಿ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here