ಪುತ್ತೂರು ಪೇಟೆಗೆ ಪ್ರಥಮ ಬಾರಿಗೆ ದಾರಿ ದೀಪ ಅಳವಡಿಸಿ ಸಾರ್ವಜನಿಕ ಸೇವೆಗೈದ ಬ್ಯಾಂಕ್ – ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸ್ಥಾಪಕರ ದಿನಾಚರಣೆಯಲ್ಲಿ ಎನ್.ಸುಬ್ರಹ್ಮಣ್ಯ ಕೊಳತ್ತಾಯ

0

ಪುತ್ತೂರು: ಪುತ್ತೂರು ಪೇಟೆಗೆ ಪ್ರಥಮ ಬಾರಿಗೆ 12 ದಾರಿ ದೀಪ ಅಳವಡಿಸಿ ಪೇಟೆಗೆ ಬೆಳಕು ನೀಡುವ ಮೂಲಕ ಪುತ್ತೂರು ಕೋ ಓಪರೇಟಿವ್ ಬ್ಯಾಂಕ್ ಕೇವಲ ಹಣಕಾಸು ವ್ಯವಹಾರ ಮಾತ್ರವಲ್ಲ ಸಾರ್ವಜನಿಕರ ಪ್ರಯೋಜನಕ್ಕಾಗಿಯೂ ಕೆಲಸ ಮಾಡುವ ಮೂಲಕ ಸಹಕಾರಿ ಪಿತಾಮಹ ಬ್ಯಾಂಕ್‌ನ ಸ್ಥಾಪಕ ಮೊಳಹಳ್ಳಿ ಶಿವರಾಯರು ಬ್ಯಾಂಕ್ ಉದ್ದೇಶವನ್ನು ನಮ್ಮ ಮುಂದಿಟ್ಟ ಮಹಾನ್ ವ್ಯಕ್ತಿ ಎಂದು ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎನ್.ಸುಬ್ರಹ್ಮಣ್ಯ ಕೊಳತ್ತಾಯ ಅವರು ಹೇಳಿದರು.

ಪುತ್ತೂರು ಕೋ ಓಪರೇಟಿವ್ ಬ್ಯಾಂಕ್‌ನಲ್ಲಿ ಆ.4ರಂದು ನಡೆದ ಸ್ಥಾಪಕರ ದಿನಾಚರಣೆಯ ಸಂದರ್ಭ ಅವರು ಮೊಳಹಳ್ಳಿ ಶಿವರಾಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ಯಾಂಕ್ ಸ್ಥಾಪನೆಗೆ ಕಾರಣರಾದ ಮೂಲ ವ್ಯಕ್ತಿಗಳನ್ನು ನೆನಪಿಸುವುದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ಮೊಳಹಳ್ಳಿ ಶಿವರಾಯ ಅಧಿಕಾರ ಸ್ಥಾನ ಪಡೆದವರಲ್ಲ. ಅವರು ಬ್ಯಾಂಕ್ ಸ್ಥಾಪನೆಯಾದಾಗ ಇದ್ದರೂ ಕೂಡಾ ಅವರು ಯಾವ ಅಧಿಕಾರ ವಹಿಸಿಕೊಂಡಿರಲಿಲ್ಲ. ಆದರೆ ನಿರ್ದೇಶನ ನೀಡುತ್ತಿದ್ದರು. ಅವರು ಎಷ್ಟೋ ಸಂಘ ಸಂಸ್ಥೆ ಸ್ಥಾಪನೆ ಮಾಡಿದರೂ ಅದರಲ್ಲಿ ಅವರ ಹೆಸರು ಮುಂಚೂಣಿಯಲ್ಲಿದ್ದರೂ ಅಧಿಕಾರದ ಹುದ್ದೆಯಲ್ಲಿ ಇರಲಿಲ್ಲ. ಹಾಗಾಗಿ ಅವರೊಬ್ಬರ ಈ ಬ್ಯಾಂಕ್‌ನ ಪ್ರೇರಣ ಶಕ್ತಿ. ಅವರ ಪ್ರೇರಣೆಯಿಂದ ಗಣಪತಿ ರಾವ್ ಇದರ ಪ್ರಥಮ ಅಧ್ಯಕ್ಷರಾದರು. ಬ್ಯಾಂಕ್ ಕೇವಲ ಹಣಕಾಸು ವ್ಯವಹಾರ ಮಾತ್ರವಲ್ಲ ಸಾಮಾನ್ಯರ ಬ್ಯಾಂಕ್ ಆಗಬೇಕು ಮತ್ತು ಸಾರ್ವಜನಿಕರಿಗೆ ಪ್ರಯೋಜನಕ್ಕಾಗಿ ಬ್ಯಾಂಕ್ ಕೆಲಸ ಮಾಡಬೇಕೆಂದು ಆರಂಭದ ದಿನದಲ್ಲಿ ಪುತ್ತೂರು ಪೇಟೆ ಕತ್ತಲಲ್ಲಿ ಇದ್ದಾಗ ಪೇಟೆ ದಾರಿಗೆ 12 ದೀಪಗಳನ್ನು ಪ್ರಥಮ ಬಾರಿಗೆ ನೀಡಿದರು. ಇದು ಬ್ಯಾಂಕ್‌ನ ಕೆಲಸ ಬಿಟ್ಟು ಹೊರಗಿನ ಕೆಲಸಕ್ಕೂ ಪ್ರೇರಣೆ ನೀಡಿತ್ತು. ಸಾಂಸ್ಕೃತಿಕ ನೆಲೆಯಲ್ಲೂ ಕೂಡಾ ಬ್ಯಾಂಕ್ ಕೆಲಸ ಮಾಡಿದೆ. ಹಾಗಾಗಿ ಮುಂದೆಯೂ ಬ್ಯಾಂಕ್‌ನ ವತಿಯಿಂದ ಒಂದೆರಡು ಕಾರ್ಯಕ್ರಮ ನಡೆಯಬೇಕೆಂದ ಅವರು ನನ್ನ ಸೌಭಾಗ್ಯವೂ ಏನೋ ನನ್ನ ತಂದೆಯವರು ಕೂಡಾ ಈ ಬ್ಯಾಂಕ್‌ನಲ್ಲಿ ಅಧ್ಯಕ್ಷರಾಗಿದ್ದರು. ಈ ಬ್ಯಾಂಕ್ ಉತ್ತುಂಗಕ್ಕೇರಳು ಇಲ್ಲಿನ ಸಿಬ್ಬಂದಿ ವರ್ಗ, ಗ್ರಾಹಕರ ಸಹಕಾರ ತುಂಬಾ ಇದೆ ಎಂದರು.

ಸ್ಥಾಪಕರ ಉದ್ದೇಶವನ್ನು ಅಳವಡಿಸಿಕೊಂಡು ಬ್ಯಾಂಕ್‌ನ ಅಭಿವೃದ್ಧಿ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಎನ್ ಕಿಶೋರ್ ಕೊಳತ್ತಾಯ ಅವರು ಮಾತನಾಡಿ ಬ್ಯಾಂಕ್ ಯಾವ ರೀತಿ ಸ್ಥಾಪನೆ ಆಗಿದೆ. ಆ ನಂತರ ಯಾವ ರೀತಿ ಬೆಳವಣಿಗೆ ಕಂಡಿದೆ ಎಂಬುದಕ್ಕೆ ಪುತ್ತೂರು ಪೇಟೆಯೇ ಸಾಕ್ಷಿಯಾಗಿದೆ. ಪುತ್ತೂರು ಪೇಟೆಯ ಬೆಳವಣಿಗೆಯಂತೆ ಬ್ಯಾಂಕ್ ಕೂಡಾ ಅಭಿವೃದ್ಧಿಯಾಗಿದೆ. ಸ್ಥಾಪಕರ ಉದ್ದೇಶವನ್ನು ಈಗಿನ ಪರಿಸ್ಥಿತಿಗೆ ಅದನ್ನು ಅಳವಡಿಸಿಕೊಂಡು ಪುತ್ತೂರಿನ ಅಭಿವೃದ್ಧಿಯಲ್ಲಿ ಬ್ಯಾಂಕ್ ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಚಿಂತಿಸಿಕೊಂಡ ಕಾರ್ಯಗಳನ್ನು ಹಾಕಿಕೊಳ್ಳಲಾಗುವುದು ಎಂದರು.

ಬ್ಯಾಂಕ್‌ನ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ ವಂದಿಸಿದರು. ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ನಿರ್ದೇಶಕರಾದ ನಾರಾಯಣ ಎ.ವಿ., ಚಂದ್ರಶೇಖರ್ ಗೌಡ ಕೆ., ವಿನೋದ್ ಕುಮಾರ್ ಬಿ., ಮಲ್ಲೇಶ್ ಕುಮಾರ್, ಹೇಮಾವತಿ, ರಮೇಶ್ ನಾಯ್ಕ್ ಕೆ., ಗಾಯತ್ರಿ ಪಿ, ಸದಾಶಿವಾ ಪೈ, ಬ್ಯಾಂಕ್‌ನ ಪ್ರಭಾರ ಮಹಾಪ್ರಬಂಧಕ ಅರುಣ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಸಾಯಿಪೂಜಾ ಹೊಟೇಲ್ ಮಾಲಕ ಯತೀಶ್ ಸುವರ್ಣ, ಬ್ಯಾಂಕ್‌ನ ಅಂತರಿಕ ಲೆಕ್ಕಪರಿಶೋದಕ ಭಾಸ್ಕರ್ ರಾವ್, ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳಾದ ಚಿದಂದರ ಗೌಡ, ಜ್ಯೋತಿ, ಪವನ್, ಶ್ರೀಕಾಂತ್, ಮಮತಾ, ರುಕ್ಮಯ, ಚೇತನ್, ನಾರಾಯಣ ನಾಯ್ಕ್, ಉದಯ ಕುಮಾರ್, ರಮ್ಯ, ಆಶೀಕಾ, ಭದ್ರತಾ ಸಿಬ್ಬಂದಿ ಪುರುಷೋತ್ತಮ, ನಿತ್ಯ ಠೇವಣಿ ಸಂಗ್ರಹಕರಾದ ಕೃಷ್ಣಪ್ಪ, ರಂಗನಾಥ್, ಶಾಂತರಾಮ, ಧನ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here