ಪುಣಚ ಗ್ರಾಮ ಪಂಚಾಯತ್: ಡಿಜಿಟಲ್ ಲೈಬ್ರೆರಿ ಕೌಶಲ ತರಬೇತಿ

0

ಪುತ್ತೂರು: ಶಿಕ್ಷಣ ಪೌಂಡೇಷನ್‌ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯೋಗದೊಂದಿಗೆ ಗ್ರಾಮ ಪಂಚಾಯತ್‌ನ ಡಿಜಿಟಲ್ ಲೈಬ್ರೆರಿಯ ಕೌಶಲ ತರಬೇತಿಯು ಪುಣಚ ಗ್ರಾಮ ಪಂಚಾಯತ್‌ನಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಕಾರ್ಯಕ್ರಮ ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ, ಕಾರ್ಯದರ್ಶಿ ರಾಮ ನಾಯ್ಕ್, ಸದಸ್ಯರಾದ ಗಿರಿಜಾ, ಲಲಿತಾ, ಆನಂದ ,ಸುಜಾತಾ, ಸರೋಜಿನಿ ಉಪಸ್ಥಿತರಿದ್ದರು. ಡಿಜಿ ವಿಕಸನ ಸಂಯೋಜಕ ರಕ್ಷಿತ್ ಮಾಹಿತಿ ನೀಡಿದರು. ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಜಯಲಕ್ಷ್ಮಿ ಹಾಗೂ ಗ್ರಾಮ ಹಿತೈಷಿ ಸ್ವಾತಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here