ಕುಟ್ರುಪ್ಪಾಡಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನಲೆ ಅಮೃತ ಸರೋವರ ಕಾಮಗಾರಿಗೆ ಚಾಲನೆ-ಸ್ವಾತಂತ್ರ್ಯೋತ್ಸವ ಆಚರಣೆ

0

  • ಪೂರ್ವಭಾವಿ ಸಭೆ

 

ಕಡಬ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗ್ “ಅಮೃತ ಸರೋವರ” ಕಾಮಗಾರಿಗೆ ಚಾಲನೆ ಹಾಗೂ ಧ್ವರೋಹಣ ಕಾರ್ಯಕ್ರಮ ಕುಟ್ರುಪ್ಪಾಡಿ ಗ್ರಾಮದ ಹಳೆಸ್ಟೇಷನ್ ಎಂಬಲ್ಲಿರುವ ಪೊಟ್ಟು ಕೆರೆಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದ ಪೂರ್ವ ಭಾವಿ ಸಭೆಯು ಕುಟ್ರುಪ್ಪಾಡಿ ಉ.ಹಿ.ಪ್ರಾ.ಶಾಲೆಯಲ್ಲಿ ಆ.4ರಂದು ನಡೆಯಿತು.


ಗ್ರಾ.ಪಂ. ಅಧ್ಯಕ್ಷ ಮೋಹನ್ ಕೆರೆಕೋಡಿಯವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ “ಹರ್ ಘರ್ ತಿರಂಗ್” ಹಿನ್ನಲೆಯಲ್ಲಿ ಮನೆ ಮನೆಗೆ ರಾಷ್ಟ್ರ ಧ್ವಜ ವಿತರಣೆ ಬಗ್ಗೆ ಮತ್ತು ಹಳೆಸ್ಟೇಷನ್ ಪೊಟ್ಟು ಕೆರೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ಅಮೃತಸರೋಹರ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದ ತಯಾರಿಯ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಮಾಜಿ ತಾ.ಪಂ. ಸದಸ್ಯೆ ಪುಲಸ್ತ್ಯ ರೈ, ಹೊಸಮಠ ಸಿ.ಎ. ಬ್ಯಾಂಕ್ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ, ಗ್ರಾ.ಪಂ. ಸದಸ್ಯರಾದ ಕಿರಣ್ ಗೋಗಟೆ, ಲಕ್ಷ್ಮೀಶ ಬಂಗೇರ, ಪ್ರಮುಖರಾದ ಎಲ್ಸಿ ತೋಮಸ್, ಶಿವಪ್ರಸಾದ್ ರೈ ಮೈಲೇರಿ, ಜಯಚಂದ್ರ ರೈ ಕುಂಟೋಡಿ ಮೊದಲಾದವರು ಸಲಹೆ ನೀಡಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ ಗೌಡ ಕಾರ್ಯಕ್ರಮದ ರೂಪುರೇಷೆ ಬಗ್ಗೆ ವಿವರಣೆ ನೀಡಿದರು. ವೇದಿಕೆಯಲ್ಲಿ ಅಮೃತಸರೋಹರ ಕೆರೆ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಂತೋಷ್, ತಾ.ಪಂ. ತಾಂತ್ರಿಕ ಸಂಯೋಜನಕ ಮೋಹಿತ್ ವೈ.ಎಸ್. ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಮೋಹಿನಿ, ಸ್ವಪ್ನಾ ಪಿ.ಜೆ, ಸುಮನ, ಯಶೋಧ ಕೆ.ಆರ್. ಮೀನಾಕ್ಷಿ ಗೌಡ, ಮಾಧವಿ, ಭಾಸ್ಕರ ಸನಿಲ, ಪ್ರಮುಖರಾದ ದಿನಕರ್ ಹೆಬ್ಬಾರ್, ದೇವಯ್ಯ ಪನ್ಯಾಡಿ, ಜನಾರ್ದನ ಗೌಡ ಕಕ್ಕೆ ಮಜಲು, ಗಂಗಾಧರ ಗೌಡ ಹಳ್ಳಿ, ಮೋನಪ್ಪ ಗೌಡ ನಾಡೋಳಿ, ಪ್ರಸಾದ್ ಗೌಡ, ಕೃಷ್ಣಪ್ಪ ದೇವಾಡಿಗ, ದುರ್ಗಾವತಿ ಸೇವಾ ಪ್ರತಿನಿಧಿ ವಾಳ್ಯ, ಸರಿತಾ ಸೇವಾ ಪ್ರತಿನಿಧಿ ಕುಟ್ರುಪಾಡಿ, ಬಾಬು ಬಡಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ ಗೌಡ ಸ್ವಾಗತಿಸಿ, ಗುಮಾಸ್ತ ಅಂಗು ವಂದಿಸಿದರು, ಸಿಬ್ಬಂದಿಗಳಾದ ಜಿತೇಶ್, ತಾರಾನಾಥ, ಉಮೇಶ್ ಸಹಕರಿಸಿದರು.

ಕೆರೆ ವೀಕ್ಷಣೆ:
ಪೂರ್ವಭಾವಿ ಸಭೆಯ ಬಳಿಕ ಪಂಚಾಯತ್ ಅಧ್ಯಕ್ಷ ಮೋಹನ್ ಕೆರೆಕೋಡಿಯವರ ನೇತೃತ್ವದಲ್ಲಿ ಹಳೆಸ್ಟೇಷನ್ ಪೊಟ್ಟು ಕೆರೆಯನ್ನು ವೀಕ್ಷಣೆ ನಡೆಸಿ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.

LEAVE A REPLY

Please enter your comment!
Please enter your name here