ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸತತ 11 ನೇ ಬಾರಿಗೆ ಡಿಸಿಸಿ ಬ್ಯಾಂಕ್ ಪ್ರಶಸ್ತಿ

0

ಪುತ್ತೂರು:ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2021-22ನೇ ಸಾಲಿನ ಆಡಿಟ್ ನಡೆದು ಸತತ 20  ವರ್ಷಗಳಿಂದ ಎ ತರಗತಿ ಆಡಿಟ್ ಶ್ರೇಣಿ ಪಡೆದು , ಶೇಕಡಾ 99.25% ಸಾಲ ವಸೂಲಾತಿಯೊಂದಿಗೆ ರೂ. 1.17 ಕೋಟಿ ಲಾಭ ಗಳಿಸಿದ್ದು ಇದಕ್ಕೆ ಸಹಕರಿಸಿದ ಸಂಘದ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ, ಸಂಘದ ಸಿಬ್ಬಂಧಿಗಳಿಗೆ ಮತ್ತು ಇಲಾಖಾಧಿಕಾರಿಗಳಿಗೆ ಅಬಿನಂದನೆ ಸಲ್ಲಿಸುತ್ತಿದ್ದೇವೆ. ಇದಕ್ಕಾಗಿ ಸತತ 11 ವರ್ಷಗಳಿಂದ ಪ್ರಶಸ್ತಿ ನೀಡುತ್ತಿರುವ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಅದ್ಯಕ್ಷರಿಗೆ, ನಿರ್ದೇಶಕರುಗಳಿಗೆ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗಕ್ಕೆ ಅಭಾರಿಯಾಗಿದ್ದೇವೆ.

ಸವಣೂರು, ಪುಣ್ಚಪ್ಪಾಡಿ, ಕುದ್ಮಾರು, ಬೆಳಂದೂರು ಮತ್ತು ಕೈಮಣ ಗ್ರಾಮದ ಸುಮಾರು3312 ಸದಸ್ಯರು, 4.87 ಕೋಟಿ ಪಾಲು ಬಂಡವಾಳ , 28.10 ಕೋಟಿ ಠೇವಣಾತಿ, 28.52 ಕೋಟಿ ಡಿಸಿಸಿ ಬ್ಯಾಂಕ್ ಸಾಲ ಮತ್ತು43.70 ಕೋಟಿ ಸದಸ್ಯರ ಸಾಲವನ್ನು ಹೊಂದಿದೆ. ಮಾಸ್ ಲಿ ಮಂಗಳೂರು ಇದರ ಸಹಯೋಗದೊಂದಿಗೆ ರೈತರ ಅಡಿಕೆ ಬೆಳೆ ಖರೀದಿ ಮತ್ತು 4 ಪಡಿತರ ಶಾಖೆಯಲ್ಲಿ ಪಡಿತರ ಮತ್ತು ರಸಗೊಬ್ಬರ ವಿತರಿಸಲಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ   ಗಣೇಶ್ ನಿಡ್ವಣ್ಣಾಯ ಕುಮಾರ ಮಂಗಲ ತಿಳಿಸಿದ್ದಾರೆ

 

 

 

LEAVE A REPLY

Please enter your comment!
Please enter your name here