ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಾಧನೆಗಾಗಿ – ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ

0

ಪುತ್ತೂರು: ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಎರಡು ಭಾರಿ ಉತ್ತಮ ಸಹಕಾರ ಸಂಘದ ಪ್ರಶಸ್ತಿ ಪುರಸ್ಕೃತವಾದ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ೨೦೨೧-೨೨ ಸಾಲಿನ ಸಾಧನೆಗಾಗಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ೩ನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಆ.೫ರಂದು ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಘವು ಸತತ ೧೪ ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಪಡೆದಿದ್ದು, ೨೦೨೧-೨೨ ಸಾಲಿನಲ್ಲಿ ಸಂಘದಲ್ಲಿ ೨೧೮೨ ‘ಎ’ ತರಗತಿ ಸದಸ್ಯರನ್ನು ಮತ್ತು ರೂ. ೭೫.೨೫ ಲಕ್ಷ ಪಾಲುಬಂಡವಾಳ ಹೊಂದಿರುತ್ತದೆ. ಸಂಘದಲ್ಲಿ ೧೧.೨೭ ಕೋಟಿ ಠೇವಣಿ ಸಂಗ್ರಹ ಹಾಗೂ ರೂ. ೯.೯೩ ಕೋಟಿ ಸಾಲ ಹೊರಬಾಕಿ ಇರುತ್ತದೆ. ತಗಾದೆಯ ಶೇ. ೯೮.೧೪ ಸದಸ್ಯರ ಸಾಲ ಮರುಪಾವತಿಯಾಗಿರುತ್ತದೆ. ಸದಸ್ಯರಿಗೆ ಸಂಘದ ಸ್ವಂತ ಬಂಡವಾಳದಿಂದಲೇ ಸಾಲ ವಿತರಿಸಲಾಗಿದೆ. ಒಟ್ಟು ವಹಿವಾಟು ರೂ. ೬೫.೫೩ ಕೋಟಿ ಯಾಗಿದ್ದು, ರೂ. ೧೪.೬೫ ಕೋಟಿ ದುಡಿಯುವ ಬಂಡವಾಳವಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಸಂಘವು ರೂ ೩೦.೦೦ ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.

ಪ್ರಶಸ್ತಿಗಳು:
೫೫ನೇ ಅಖಿಲ ಭಾರತ ಸಹಕಾರಿ ಸಪ್ತಾಹ -೨೦೦೮ ರಲ್ಲಿ ಮತ್ತು ೬೭ನೇ ಅಖಿಲ ಭಾರತ ಸಹಕಾರಿ ಸಪ್ತಾಹ -೨೦೧೭ ರಲ್ಲಿ ೨ ಬಾರಿ ಉತ್ತಮ ಸಹಕಾರ ಸಂಘದ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇವರಿಂದ ಗುರುತಿಸಿ ಸನ್ಮಾನಿಸಲ್ಪಟ್ಟಿದೆ. ೨೦೧೯-೨೦ ಹಾಗೂ ೨೦೨೦-೨೧ ನೇ ಸಾಲಿನಲ್ಲಿ ಸತತವಾಗಿ ೨ ವರ್ಷಗಳಿಂದ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ ಬಗ್ಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪುರಸ್ಕಾರ ನೀಡಿ ಗೌರವಿಸಿದೆ. ಸಂಘದ ಆಡಳಿತ ಮಂಡಳಿಯಲ್ಲಿ ೧೩ ಮಂದಿ ಚುನಾಯಿತ ಸದಸ್ಯರಿದ್ದು, ಗೌರಿ ಯಚ್. ಅಧ್ಯಕ್ಷರು, ಉಮಾ ಡಿ ಪ್ರಸನ್ನ ಉಪಾಧ್ಯಕ್ಷರು, ಮತ್ತು ನಿರ್ದೇಶಕರಾಗಿ ಮೋಹಿನಿ ದಿವಾಕರ್, ಪ್ರೇಮಲತಾ ರಾವ್ ಟಿ., ಶಶಿಕಲಾ, ವತ್ಸಲಾರಾಜ್ಞೀ, ಮೋಹಿನಿ ಪಿ. ನಾಯ್ಕ, ಉಷಾ ಮುಳಿಯ, ಯಶೋದಾ, ಜಯಶ್ರೀ ಎಸ್. ಶೆಟ್ಟಿ, ವಿಜಯ ಲಕ್ಷ್ಮೀ, ಇಂದಿರಾ ಪಿ ಆಚಾರ್ಯ, ಅರ್ಪಣಾ ಎಸ್, ಮುಖ್ಯ ಕಾರ್ಯನಿರ್ವಣಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here