ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ವಿಶಿಷ್ಟ ಪ್ರಯತ್ನ – ಆಜಾದಿಕಾ ಅಮೃತ ಮಹೋತ್ಸವ ಪ್ರಯುಕ್ತ  75 ರಾಷ್ಟ್ರನಾಯಕರ ಸಂಗ್ರಹಿತ ಲೇಖನಗಳು

0

ಪುತ್ತೂರು:  ಸಮಯದ ಸದುಪಯೋಗವನ್ನು ಸಮರ್ಪಕವಾಗಿ ಮಾಡಿ ಕೊಂಡಲ್ಲಿ ಜ್ಞಾನವನ್ನು ಸ್ಪಲ್ಪ ಮಟ್ಟಿಗಾದರೂ ವೃದ್ಧಿಸಿಕೊಳ್ಳಬಹುದು ಎಂದು ಮನಗಂಡು ಆಜಾದಿಕಾ ಅಮೃತ ಮಹೋತ್ಸವದ ಸವಿನೆನಪಿಗಾಗಿ 75 ರಾಷ್ಟ್ರನಾಯಕರ ಸಂಗ್ರಹಿತ ಲೇಖನಗಳನ್ನು ಸಂಗ್ರಹಿಸಿ ತಮ್ಮದೇ ಕೈಬರಹದ ಮೂಲಕ ಜೋಡಿಸಿ ಉಳಿದ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡುವತ್ತ ಕಿರುಪ್ರಯತ್ನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಮಾಡಿದ್ದರು.

ಅ.3ರಂದು ಉದ್ಘಾಟನಾ ಸಮಾರಂಭವು ನಡೆಯಿತು. ಉದ್ಘಾಟನಾ ಸಮಾರಂಭವನ್ನು ರೋ. ಜಗಜೀವನದಾಸ್ ರೈ ಇವರು ದೀಪ ಪ್ರಜ್ವಲಿಸುವುದರ ಮೂಲಕ ಚಾಲನೆ ನೀಡಿದರು. ಅಲ್ಲದೇ 10ನೇ ತರಗತಿಯ ವಿದ್ಯಾರ್ಥಿನಿಯರಾದ ಯುಕ್ತಶ್ರೀ ಮತ್ತು ದೃಶಾ ಇವರ ಕಾರ್ಯತತ್ಪರತೆಯನ್ನು ಮೆಚ್ಚಿ, ಇನ್ನೂ ಇಂತಹ ಕಾರ್ಯವನ್ನು ಮುಂದುವರೆಸುವಂತೆ ಹುರಿದುಂಬಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

ಕೊರೋನ ಎಂಬ ಮಹಾಮಾರಿಯಿಂದ ಬಳಲುತ್ತಿದ್ದ ಆ ದಿನಗಳಲ್ಲಿಅಧ್ಯಾಪಕ ವೃಂದ ನಮಗೆ ಪಾಠವನ್ನು ಆನ್‍ಲೈನ್ ಮೂಲಕ ಬೋಧನೆ ಮಾಡುತ್ತಿದ್ದರು. ಬೋಧನೆಯ ಬಳಿಕ ನಮ್ಮ ಸಮಯವನ್ನು ಹೇಗೆ ಸದುಪಯೋಗಿಸಿಕೊಳ್ಳಬಹುದು ಎಂದು ಯೋಚಿಸಿದಾಗ ನನಗೆ ಮತ್ತು ನನ್ನ ಗೆಳತಿಗೆ ಒಂದು ಉಪಾಯ ಹೊಳೆಯಿತು. ನಾವಿಬ್ಬರೂ ದಿನಪತ್ರಿಕೆಗಳನ್ನು ಗಮನಿಸಿದಾಗ ಥಟ್ಟನೆ ರಾಷ್ಟ್ರನಾಯಕರ ಲೇಖನಗಳನ್ನು ಸಂಗ್ರಹಿಸಿ ಬರೆದಿಡುವ ಯೋಚನೆ ಮಾಡಿದೆವು. ಇಬ್ಬರೂ ಸೇರಿ 75 ಮಹಾಪುರುಷರ ಬಗ್ಗೆ ಸಂಗ್ರಹಿಸಿ ಬರವಣಿಗೆ ರೂಪಕ್ಕಿಳಿಸಿದೆವು. ಈ ಲೇಖನಗಳಲ್ಲಿ ನಮ್ಮ ದೇಶಕ್ಕಾಗಿ ಅವಿರತವಾಗಿ ಹೋರಾಡಿ ವೀರಮರಣವನ್ನು ಗೈದವರ ಕುರಿತು ಸಂಗ್ರಹಿಸಿ ಬರೆಯಲಾಗಿದೆ. ಇದು ಒಂದು ರೀತಿಯಲ್ಲಿ ನಮಗೆ ಸ್ಪೂರ್ತಿಯ ವಿಚಾರವೂ ಆಗಿದೆ. ಸಮಯದ ಸದುಪಯೋಗವನ್ನು ಹೀಗೂ ಮಾಡಬಹುದು ಎಂಬುದನ್ನು ಅರಿತೆವು” – ಇದು ಸಂಗ್ರಹಿತ ಲೇಖನಗಳನ್ನು ತಯಾರಿಸಿ ಒಂದು ವಿಶಿಷ್ಟ ಪ್ರಯತ್ನವನ್ನು ಮಾಡಿದ 10ನೇ ತರಗತಿಯ ವಿದ್ಯಾರ್ಥಿನಿಯರಾದ ಯುಕ್ತಶ್ರೀ ಮತ್ತು ದೃಶಾ ಇವರ ಅನಿಸಿಕೆಯ ಮಾತುಗಳು.

LEAVE A REPLY

Please enter your comment!
Please enter your name here