ಸವಣೂರು ಗ್ರಾಮ ಪಂಚಾಯತ್‌ ಸ್ವಾತಂತ್ರ್ಯೋತ್ಸವದ ಹರ್‌ ಘರ್‌ ತಿರಂಗಾ ಯಶಸ್ವಿಗೆ ಪೂರ್ವಭಾವಿ ಸಭೆ

0

ಸವಣೂರು : ಸ್ವಾತಂತ್ರ್ಯದಿನಾಚರಣೆಯ ಅಮೃತಮಹೋತ್ಸವ ಹಾಗೂ ಹರ್‌ ಘರ್‌ ತಿರಂಗಾವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಪೂರ್ವಭಾವಿ ಸಭೆ ಸವಣೂರು ಗ್ರಾ.ಪಂ.ನ ಕುಮಾರಧಾರಾ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆ.4ರಂದು ನಡೆಯಿತು.

ಸಭೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ಭರತ್‌ರಾಜ್‌ ಕೆ ಮಾತನಾಡಿ, ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಆ.13ರಿಂದ ಆ.15ರ ವರೆಗೆ ಪ್ರತೀ ಮನೆಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸಬೇಕು.ರಾಷ್ಟ್ರ ಧ್ವಜಕ್ಕೆ ಅಪಚಾರ ಆಗದಂತೆ ಎಲ್ಲರೂ ಜಾಗರೂಕರಾಗಿರಬೇಕು ಎಂದರು.

ಸವಣೂರು ಸ.ಉ.ಹಿ.ಪ್ರಾ.ಶಾಲಾ ಮುಖ್ಯಗುರು ಬಾಲಕೃಷ್ಣ ಕೆ. ಅವರು ಧ್ವಜಾರೋಹಣ ಮಾಡುವ ವಿಧಾನಗಳು ಹಾಗೂ ಅವರೋಹಣದ ನಿಯಮಗಳನ್ನು ವಿವರಿಸಿದರು. ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ,ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಗ್ರಾ.ಪಂ.ವತಿಯಿಂದ ನಡೆಸಲಾಗಿದೆ.ಆ.15ರಂದು ಗ್ರಾ.ಪಂ.ಕಛೇರಿಯಲ್ಲಿ ಧ್ವಜಾರೋಹಣ,ಬಳಿಕ ಅಮೃತ ಸರೋವರ ಕೊಂಬಕರೆಯಲ್ಲಿ,ಅಮೃತ ಪಾರ್ಕ್‌ ಪುಣ್ಚಪ್ಪಾಡಿಯಲ್ಲಿ ಧ್ವಜಾರೋಹಣ ನಡೆಯಲಿದೆ.ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸುವಿಕೆ,ಮಾಜಿ ಗ್ರಾ.ಪಂ.ಸದಸ್ಯರನ್ನು ಗುರುತಿಸುವಿಕೆ,75 ಜನರಿಗೆ ಪಿಂಚಣಿಯ ಆದೇಶ ಪತ್ರ ನೀಡುವ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಸವಣೂರು ಗ್ರಾಮ ಕರಣಿಕ ಚಂದ್ರ ನಾಯ್ಕ ಮಾತನಾಡಿ,ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡುವ ಸಲುವಾಗಿ ಗ್ರಾ.ಪಂ.ಸದಸ್ಯರು ವಿವರ ನೀಡುವಂತೆ ತಿಳಿಸಿದರು.

ಮಾದರಿ ಕಾರ್ಯವಾಗಲಿ ಸವಣೂರು ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮಗಳು ಮಾದರಿ ಕಾರ್ಯವಾಗಲಿ,ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎ.ಮನ್ಮಥ ಹೇಳಿದರು.
ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ಸದಸ್ಯರಾದ ಸದಸ್ಯರಾದ ಅಬ್ದುಲ್‌ ರಝಾಕ್‌ ಕೆನರಾ,ತೀರ್ಥರಾಮ ಕೆಡೆಂಜಿ,ಎಂ.ಎ.ರಫೀಕ್‌,ಚಂದ್ರಾವತಿ ಸುಣ್ಣಾಜೆ,ಇಂದಿರಾ ಬೇರಿಕೆ, ಸುಂದರಿ ಬಿ.ಎಸ್.‌,ತಾರಾನಾಥ ಸುವರ್ಣ ಪಾಲ್ತಾಡಿ,ಬಾಬು ಎನ್‌, ಪುಣ್ಚಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಶೇಷಮ್ಮ,ಕುಮಾರಮಂಗಲದ ಜಾನಕಿ ಯು., ಮಂಜುನಾಥನಗರದ ಸುಮಂಗಲಾ,ಪಾಲ್ತಾಡಿ ಶಾಲಾ ಮುಖ್ಯಗುರು ಸುಜಾತ ರೈ ಪಿ.ಜಿ.,ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶಿಕ್ಷಕ ರೋಹಿತ್‌, ಮೊಗರು ಶಾಲಾ ಶಿಕ್ಷಕಿ ಕವಿತಾ ಎನ್.‌, ಪುಣ್ಚಪ್ಪಾಡಿ ಶಾಲಾ ಶಿಕ್ಷಕಿ ಫ್ಲಾವಿಯಾ ಮೊಂತೆರೋ,ಸವಣೂರು ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್‌ ರೈ ಸೂಡಿಮುಳ್ಳು,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಚಂದ್ರಶೇಖರ್‌ ಪಿ.,ಕೆನರಾ ಬ್ಯಾಂಕಿನ ಪ್ರಬಂಧಕಿ ಸುನೀತಾ,ಯುವಕ ಮಂಡಲದ ಕಾರ್ಯದರ್ಶಿ ಜಿತಾಕ್ಷ ಜಿ, ಕೀರ್ತನ್‌ ಎಂ.,ಸವಣೂರು ಎಲ್.ಸಿ.ಆರ್.ಪಿ. ಉಷಾ,ರೇವತಿ,ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೇವತಿ ಕೆ.,ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ದಿವಾಕರ ಬಸ್ತಿ,ಪುಷ್ಪಾವತಿ ಕೇಕುಡೆ,ಗೀತಾ ಜಿ.ಎಸ್.‌,ಯತೀಂದ್ರ ಶೆಟ್ಟಿ ಮಠ ಸವಣೂರು,ಆಶಾ ಕಾರ್ಯಕರ್ತೆಯರಾದ ಅನಿತಾ, ಗೀತಾ ಕೆ.,ಚಂದ್ರಾವತಿ ,ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎ.ಮನ್ಮಥ ,ಗ್ರಂಥಪಾಲಕಿ ಶಾರದಾ,ಸಿಬಂದಿಗಳಾದ ಪ್ರಮೋದ್‌ ಕುಮಾರ್‌ ರೈ,ದಯಾನಂದ ಮಾಲೆತ್ತಾರು, ಯತೀಶ್‌ ಕುಮಾರ್‌,ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here