ಪುತ್ತೂರು : ಪುಣಚ ಶ್ರೀಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಭವನದಲ್ಲಿ ಆ.5ರಂದು 20ನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆ ವೇ.ಮೂ.ಸುಬ್ರಾಯ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಜರಗಲಿದೆ.
ಬೆಳಿಗ್ಗೆ 8ರಿಂದ ಭಜನೆ, 9ರಿಂದ ಪೂಜಾರಂಭ, 11ರಿಂದ ನಡೆಯುವ ಸಭಾಕಾರ್ಯಕ್ರಮದಲ್ಲಿ ಪುಣಚ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲಾವಣ್ಯ ಡಿ. ಅಧ್ಯಕ್ಷತೆ ವಹಿಸಲಿದ್ದಾರೆ. ತೆಂಕಿಲ ವಿವೇಕಾನಂದ ಕ.ಮಾ.ಶಾಲೆಯ ಶಿಕ್ಷಕಿ ವೀಣಾ ಸರಸ್ವತಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.