ಓಟರ‍್ಸ್ ಹೆಲ್ಪ್ ಲೈನ್ ಮೊಬೈಲ್ ಆಪ್ ಮೂಲಕ ಮತದಾರರ ಗುರುತಿನ ಚೀಟಿ(ಎಪಿಕ್)ಗೆ ಆಧಾರ್ ಜೋಡಿಸಿ

0

ಪುತ್ತೂರು:ಮೊಬೈಲ್ ಆಪ್ ಮೂಲಕ ಮತದಾರರ ಗುರುತಿನ ಚೀಟಿ(ಎಪಿಕ್)ಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕಾರ್ಯಕ್ಕೆ ಚುನಾವಣಾ ಆಯೋಗ ಚಾಲನೆ ನೀಡಿದೆ. ಆಧಾರ ಜೋಡಣೆಗೆ ಓಟರ‍್ಸ್ ಹೆಲ್‌ಲೈನ್ ಮೊಬೈಲ್ ಆಪ್ ಮೂಲಕ ಅವಕಾಶವಿದೆ. ಎಪಿಕ್‌ಗೆ ಆಧಾರ್ ಜೋಡಣೆ ವಿವಿಧ ಹಂತಗಳ ಸಂಪೂರ್ಣ ಮಾಹಿತಿ ನೀಡಲಾಗುತ್ತಿದ್ದು ಸಾರ್ವಜನಿಕರು ಇದರ ಆಧಾರದಲ್ಲಿ ಆಧಾರ್ ಜೋಡಿಸಬಹುದು.

ಪ್ರಥಮ ಹಂತವಾಗಿ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು. ಅದರಲ್ಲಿ ಮತದಾರರ ಸಹಾಯವಾಣಿ ಅಪ್ಲಿಕೇಶನ್ ತೆಗೆದು ಒಪ್ಪಿಗೆ ಕ್ಲಿಕ್ ಮಾಡುವುದು. ನಂತರ ಮತದಾರರ ನೋಂದಣಿ ಮೇಲೆ ಕ್ಲಿಕ್ ಮಾಡುವುದು. ಎಲೆಕ್ಟೋರಲ್ ಅಥೆಂಟಿಕೇಶನ್ ಫಾರ್ಮ್ (ಫಾರ್ಮ್-6ಬಿ) ಮೇಲೆ ಕ್ಲಿಕ್ ಮಾಡುವುದು. ಅದರಲ್ಲಿ ಲೆಟ್ಸ್ ಸ್ಟಾರ್ಟ್ ಕ್ಲಿಕ್ ಮಾಡುವುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸೆಂಡ್ ಒಟಿಪಿ ಕ್ಲಿಕ್ ಮಾಡಬೇಕು. ಒಟಿಪಿ ನಮೂದಿಸಿ ಮತ್ತು ನಂತರ ವೆರಿಫೈ ಕ್ಲಿಕ್ ಮಾಡಬೇಕು. ಮೊದಲ ಆಯ್ಕೆಯನ್ನು ಆಯ್ಕೆ ಮಾಡಿ ಎಸ್ ಈ ಹ್ಯಾವ್ ಓಟರ್ ಐಡಿ ಮತ್ತು ಮುಂದೆ ಕ್ಲಿಕ್ ಮಾಡುವುದು. ನಿಮ್ಮ ವೋಟರ್ ಐಡಿ (ಎಪಿಕ್) ಸಂಖ್ಯೆಯನ್ನು ನಮೂದಿಸಿ, ರಾಜ್ಯವನ್ನು ಆಯ್ಕೆ ಮಾಡಿ ಮತ್ತು ನಂತರ ಕ್ಲಿಕ್ ಮಾಡಬೇಕು. ವಿವರಗಳನ್ನು ಪಡೆದುಕೊಳ್ಳಿ ಮತ್ತು ಪ್ರೊಸೆಸ್‌ಡ್ ಮೇಲೆ ಕ್ಲಿಕ್ ಮಾಡುವುದು. ಪರದೆಯಲ್ಲಿ ತೋರಿಸಿರುವ ನಿಮ್ಮ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ನೆಕ್ಸ್ಟ್ ಕ್ಲಿಕ್ ಮಾಡುವುದು. ನಿಮ್ಮ ಆಧಾರ್ ಸಂಖ್ಯೆ ಮೊಬೈಲ್ ಸಂಖ್ಯೆ ನಮೂದಿಸಿ ಡನ್ ಕ್ಲಿಕ್ ಮಾಡಿ. ಡನ್ ಕ್ಲಿಕ್ ಮಾಡಿದ ನಂತರ, ಫಾರ್ಮ್-6ಬಿ ಪೂರ್ವವೀಕ್ಷಣೆ ಪುಟವನ್ನು ಪ್ರದರ್ಶಿಸಲಾಗುತ್ತದೆ. ಮತ್ತೊಮ್ಮೆ ನೀವು ನಿಮ್ಮ ವಿವರಗಳನ್ನು ಪರಿಶೀಲಿಸಿ ಮತ್ತು ಫಾರ್ಮ್-6ಬಿ ನ ಅಂತಿಮ ಸಲ್ಲಿಕೆಗಾಗಿ ದೃಢೀಕರಿಸಿ ಕ್ಲಿಕ್ ಮಾಡಿ. ಅಂತಿಮ ದೃಢೀಕರಣದ ನಂತರ ನೀವು ಫಾರ್ಮ್-6ಬಿ ಉಲ್ಲೇಖ ಸಂಖ್ಯೆಯನ್ನು ಸ್ವೀಕರಿಸಬಹುದಾಗಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here