ಜಿಲ್ಲೆಯಲ್ಲಿ ನಡೆದ 3 ಹತ್ಯೆ ಪ್ರಕರಣ: ಮುಸ್ಲಿಂ ಜನ ಪರಿಷತ್ ಖಂಡನಾ ಸಭೆ

0

ಪುತ್ತೂರು: ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ನಡೆದ ಮಸೂದ್, ಪ್ರವೀಣ್ ನೆಟ್ಟಾರು ಹಾಗೂ ಫಾಝಿಲ್‌ರವರ ಹತ್ಯೆಯನ್ನು ಖಂಡಿಸಿ ಮುಸ್ಲಿಂ ಜನಪರಿಷತ್ ಕರ್ನಾಟಕ ರಾಜ್ಯ ವತಿಯಿಂದ ಖಂಡನಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಮುಸ್ಲಿಂ ಜನ ಪರಿಷತ್ ಸಂಚಾಲಕ ಎಂ.ಪಿ ಅಬುಬಕ್ಕರ್ ವಹಿಸಿ ಮಾತನಾಡಿ ದ.ಕ ಜಿಲ್ಲೆ ಬುದ್ಧಿವಂತರ ಜಿಲ್ಲೆಯಾಗಿದ್ದು ನಾವು ಶಾಂತಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಬೇಕು. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೋಮು ಘರ್ಷಣೆ ಹಾಗೂ ಕೊಲೆಗಳು ಬಹಳ ಆಘಾತಕಾರಿಯಾಗಿದೆ. ಇದರಿಂದ ಕರ್ನಾಟಕ ರಾಜ್ಯವೇ ತತ್ತರಿಸಿ ಹೋಗುವಂತಾಗಿದೆ. ಪ್ರವೀಣ್ ನೆಟ್ಟಾರುರವರ ಕುಟುಂಬಕ್ಕೆ ನೀಡಿದಂತೆ ಮಸೂದ್ ಹಾಗೂ ಫಾಝಿಲ್‌ರವರ ಕುಟುಂಬಕ್ಕೂ ಸರಕಾರ ಪರಿಹಾರ ನೀಡಬೇಕು. ಮತ್ತು ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವಂತೆ ಆಗಬೇಕು ಎಂದು ಹೇಳಿದರು. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದರು. ಸಭೆಯಲ್ಲಿ ಯೂಸುಫ್ ಸಾಲ್ಮರ, ಮೊಹಮ್ಮದ್ ಪಡೀಲ್, ಮುನೀರ್, ಇದಿನಬ್ಬ, ಅಬುಬಕ್ಕರ್ ಕೆ.ಪಿ. ಪಡೀಲ್, ಇಬ್ರಾಹಿಂ ಸಾಲ್ಮರ, ಪುತ್ತು ಹಾಜಿ ಬಾಯಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪರಿಷತ್‌ನ ಕಾರ್ಯದರ್ಶಿ ಯೂಸುಫ್ ಸಾಲ್ಮರ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here