ಆ.5ರಿಂದ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರಾರ್ಥವಾಗಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಆ.5ರಿಂದ7ರ ತನಕ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.

ಆ.4ರಂದು ಸಪ್ತಸತಿ ಪಾರಾಯಣ, ಆ.5ರಂದು ಬೆಳಿಗ್ಗೆ 7 ಗಂಟೆಯಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, 12 ತೆಂಗಿನಕಾಯಿ ಗಣಪತಿ ಹೋಮ, ಚಂಡಿಕಾ ಯಾಗ ಪ್ರಾರಂಭ, ಸರ್ಪಸಂಸ್ಕಾರ, ಮಂಗಳಹೋಮ, ಆಶ್ಲೇಷ ಬಲಿ, ಅಷ್ಟವಟು ಆರಾಧನೆ, ಮಧ್ಯಾಹ್ನ ಚಂಡಿಕಾ ಹವನ ಪೂರ್ಣಾಹುತಿ, ಸುವಾಸಿನೀ ಆರಾಧನೆ, ನಾಗದೇವರಿಗೆ ತಂಬಿಲ, ದೈವಗಳಿಗೆ ತಂಬಿಲ, ಸಂಜೆ 6 ಗಂಟೆಯಿಂದ ಸುದರ್ಶನ ಹೋಮ, ನರಸಿಂಹ ಹೋಮ, ಬಾಧಾಕರ್ಷಣೆ, ಉಚ್ಛಾಟನೆ, ದುರ್ಗಾಪೂಜೆ, ದಂಪತಿ ಆರಾಧನೆ ನಡೆಯಲಿದೆ.

ಆ.6ರಂದು ಬೆಳಿಗ್ಗೆ 12 ತೆಂಗಿನಕಾಯಿ ಹೋಮ, ಗಣಪತಿ ಹೋಮ, ತಿಲಹೋಮ, ಕೂಷ್ಮಾಂಡ ಹೋಮ, ಪದನಾಮ ಹೋಮ, ದ್ವಾದಶ ಮೂರ್ತಿ ಆರಾಧನೆ, ಸಾಯುಜ್ಯ ಪೂಜೆ ಸಂಜೆ ಆ ಗಂಟೆಯಿಂದ ಪ್ರಾಸಾದ ಶುದ್ಧಿ, ವಾಸ್ತುಬಲಿ, ರುದ್ರ ಪಾರಾಯಣ ನಡೆಯಲಿದೆ.

ಆ.7ರಂದು 12 ತೆಂಗಿನಕಾಯಿ ಗಣಪತಿ ಹೋಮ, ರುದ್ರಯಾಗ ಪ್ರಾರಂಭ, ಕಲಶಪೂಜೆ, ಮಧ್ಯಾಹ್ನ ರುದ್ರಯಾಗದ ಪೂರ್ಣಾಹುತಿ, ದೇವರಿಗೆ ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆನಡೆಯಲಿದೆ.

ಆ.12 ವರಮಹಾಲಕ್ಷ್ಮೀ ಪೂಜೆ: ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ ವರಮಹಾಲಕ್ಷ್ಮೀ ಪೂಜೆಯು ಆ.12ರಂದು ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.