ಬೀಡಿ, ಗಣಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

0

ಪುತ್ತೂರು: ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ವತಿಯಿಂದ ಬೀಡಿ ಮತ್ತು ಇತರ ಗಣಿ ಕೆಲಸಗಾರರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಬೀಡಿ ಕಾರ್ಮಿಕರ ಮಕ್ಕಳ ಜೊತೆಗೆ ಸುಣ್ಣದ ಕಲ್ಲು, ಡಾಲಮೈಟ್ ಗಣಿಗಳು, ಕಬ್ಬಿಣ, ಕ್ರೋಮ್ ಮತ್ತು ಮ್ಯಾಂಗನೀಸ್ ಅದಿರು ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳೂ ಇದರ ಸೌಲಭ್ಯ ಪಡೆದುಕೊಳ್ಳಬಹುದು. 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 16ರೊಳಗೆ ಪ್ರಥಮ ಹಂತದಲ್ಲಿ ಶಾಲೆ ಅಥವಾ ವಿದ್ಯಾಸಂಸ್ಥೆಯಲ್ಲೇ ಪರಿಶೀಲನೆ ನಡೆಸಬೇಕು. ಅಕ್ಟೋಬರ್ 31ರೊಳಗೆ ಎರಡನೇ ಹಂತದಲ್ಲಿ ರಾಜ್ಯ ನೋಡೆಲ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಪಿಯುಸಿ ಅಥವಾ 10ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಸಬೇಕು. ನವಂಬರ್ 15ರೊಳಗೆ ವಿದ್ಯಾಸಂಸ್ಥೆಯಲ್ಲೇ ಪರಿಶೀಲನೆ ನಡೆಸಿ, ನವಂಬರ್ 30ರೊಳಗೆ ರಾಜ್ಯ ನೋಡೆಲ್ ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸುತ್ತಾರೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ https:/scholarships.gov.in ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ [email protected] ಅಥವಾ 0120-6619540ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here