ಸುದಾನ ಶಾಲೆಯಿಂದ ಯೋಧ ವಿಜಯಕುಮಾರ್‌ರವರಿಗೆ ಸನ್ಮಾನ

0

ಪುತ್ತೂರು: ಕೇಂದ್ರ ಮೀಸಲು ಪಡೆ(CRPF)ನಲ್ಲಿ 21 ವರ್ಷಗಳ ಕಾಲ ದೇಶಸೇವೆಗೈದು ನಿವೃತ್ತರಾದ ವಿಜಯಕುಮಾರ್ ಎನ್.ಆರ್‌ರವರನ್ನು ನೆಲಪ್ಪಾಲದಲ್ಲಿರುವ ಅವರ ಸ್ವಗೃಹದಲ್ಲಿ ಸುದಾನ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಸಂಚಾಲಕರಾದ ವಂ|ವಿಜಯ ಹಾರ್ವಿನ್, ಕೋಶಾಧಿಕಾರಿ ಆಸ್ಕರ್ ಆನಂದ್, ಮುಖ್ಯಶಿಕ್ಷಕಿ  ಶೋಭಾ ನಾಗರಾಜ್‌ರವರು ಯೋಧ ವಿಜಯ್‌ರವರನ್ನು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ವಿದ್ಯಾರ್ಥಿ ನಾಯಕರಾದ ಸನ್ವರ್ಯ, ಸೃಷ್ಠಿ ಸೆಲ್ಯೂಟ್ ಗೌರವ ಸಲ್ಲಿಸಿದರು. ಉಪ ಮುಖ್ಯಶಿಕ್ಷಕಿ. ಶ್ರೀಮತಿ ಲವೀನ ನವೀನ್ ಹನ್ಸ್, ಶಿಕ್ಷಕ ಸಂಯೋಜಕರಾದ ಪ್ರತಿಮಾ, ಅಮೃತವಾಣಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here