ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ವತಿಯಿಂದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ‘ಸ್ವಾತಂತ್ಯೋತ್ಸವದ ಅರ್ಥಪೂರ್ಣ ಆಚರಣೆ ಹೇಗೆ? ಎನ್ನುವ ವಿಷಯದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಆನ್ಲೈನ್ ಪ್ರಬಂಧ ಸ್ಪರ್ಧೆ ನಡೆಯಲಿದೆ.
ರಾಜ್ಯದ ಯಾವುದೇ ಕಾಲೇಜಿನ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಪ್ರಬಂಧ ಈ ಮುಂಚೆ ಎಲ್ಲೂ ಪ್ರಕಟವಾಗಿರದ ಸ್ವಬರಹವಾಗಿರಬೇಕು. ನಕಲು ಬರಹಗಳಿಗೆ ಅವಕಾಶ ಇರುವುದಿಲ್ಲ. ಪ್ರಬಂಧ 350 ಪದಗಳಿಂದ ಮೀರಿರಬಾರದು. ಆಯ್ಕೆಗೊಂಡ ಪ್ರಥಮ, ದ್ವಿತೀಯ ಬರಹಗಳಿಗೆ ಉತ್ತಮ ಪುರಸ್ಕಾರ ನೀಡಲಾಗುವುದು.
ಪ್ರಬಂಧ ಬರೆಯುವವರ ಹೆಸರು, ತರಗತಿ, ಕಾಲೇಜು ಹೆಸರು ದಾಖಲಿಸಬೇಕು. ಪ್ರಬಂಧ ತಲುಪಲು ಇದೇ ಆಗಸ್ಟ್ 10ಅಂತಿಮ ದಿನಾಂಕವಾಗಿದ್ದು ಆ.15ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದಂದು ಕಾಲೇಜು ಕಾರ್ಯಕ್ರಮದಲ್ಲಿ ವಿಜೇತರನ್ನು ಘೋಷಿಸಲಾಗುವುದು.
ಈ ಕೆಳಗಿನ ಮೇಲ್ ಮೂಲಕ ಅಥವಾ ಪಿಡಿಎಫ್ ಫೈಲ್ ಮಾಡಿ ವಾಟ್ಸಪ್ ಮೂಲಕ ಕಳುಹಿಸಬಹುದು. ಫೈಲ್ ಮೂಲಕ ಕಳುಹಿಸದ ಬರಹ ಪರಿಗಣಿಸಲಾಗುವುದಿಲ್ಲ.
Email: [email protected]
ವಾಟ್ಸಾಪ್ ನಂಬರ್ +918147295883, ಹೆಚ್ಚಿನ ಮಾಹಿತಿಗಾಗಿ +918618361174 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.