ಭಾರತ್ ಸ್ಕೌಟ್ಸ್, ಗೈಡ್ಸ್ ಪರೀಕ್ಷೆ: ರಾಮಕುಂಜ ಆಂಗ್ಲ ಮಾಧ್ಯಮ ಶಾಲೆಯ 13 ವಿದ್ಯಾರ್ಥಿಗಳಿಗೆ ಗೋಲ್ಡನ್ ಆರೋ ಪ್ರಶಸ್ತಿ

0

ರಾಮಕುಂಜ: 2021-22ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಗೋಲ್ಡನ್ ಆರೋ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ೧13 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗೋಲ್ಡನ್ ಆರೋ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.


ಕಬ್ ವಿಭಾಗದಲ್ಲಿ ಛಾಯಾಸ್ವರೂಪ್ ಎ.ಜಿ., ಅದ್ವಿತ್ ರೈ, ಸುಮುಖ ಎಸ್ ಹಾಗೂ ಶ್ರೇಷ್ಠ ಪಿ ವಿ., ಬುಲ್‌ಬುಲ್ ವಿಭಾಗದಲ್ಲಿ ತನ್ವಿ, ಎನ್.ಸಿ. ಜಶ್ವಿತ, ಸ್ವಸ್ತಿ, ಸೃಜನ ಕೆ.ಎಸ್., ಶ್ರೇಯಾ, ಆತ್ಮಿ, ಜನನಿ, ಲಿಷಾ ಪಿ, ಹಾಗೂ ಶಿಮಿಕಾ ಗೌಡರವರು ಗೋಲ್ಡನ್ ಆರೋ ಪುರಸ್ಕಾರಕ್ಕೆ ಆಯ್ಕೆಯಾದರು. ಇವರು ಉಡುಪಿ ಕೃಷ್ಣಮಠದ ಮುಕುಂದ ಕೃಪಾ ವಿದ್ಯಾಲಯದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಇವರಿಗೆ ಕಬ್ ಮಾಸ್ಟರ್ ಸುನಂದ ಕೆ.ಸಿ, ಕವಿತಾ ಬಿ ಹಾಗೂ ಫ್ಲಾಕ್ ಲೀಡರ್ ಸಂಧ್ಯಾ ಎ.ಇವರು ಸಂಸ್ಥೆಯ ಕಾರ್‍ಯದರ್ಶಿ ಕೆ. ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ್ ಎಸ್.ಟಿ, ಮುಖ್ಯೋಪಾಧ್ಯಾಯಿನಿ ಲೋಹಿತಾ ಎ.,ರವರ ಮಾರ್ಗದರ್ಶನದೊಂದಿಗೆ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here