ಹನುಮಗಿರಿ ಶ್ರೀಗಜಾನನ ವಿದ್ಯಾಸಂಸ್ಥೆಯಲ್ಲಿ ಆಟಿ-ಕೂಟ ಆಚರಣೆ

0

ಪುತ್ತೂರು : ಹನುಮಗಿರಿ ಶ್ರೀಗಜಾನನ ವಿದ್ಯಾಸಂಸ್ಥೆಗಳಲ್ಲಿ ಆಟಿ-ಕೂಟ ಕಾರ್ಯಕ್ರಮ ಸಂಸ್ಥೆಯ ಪ್ರಾಂಶುಪಾಲ ಶಾಮಣ್ಣ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಾ.ಶ್ರೀಕುಮಾರ್ ಕತ್ರಿಬೈಲು ಆಟಿ ತಿಂಗಳ ಮಹತ್ವ ಹಾಗೂ ವಿವಿಧ ಸಸ್ಯ ಸಂಪನ್ಮೂಲದಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಿದರು. ಸಹಶಿಕ್ಷಕಿ ಅಕ್ಷತಾ ಆಟಿ ತಿಂಗಳ ಆಚರಣೆ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಆಟಿಯಲ್ಲಿ ತಯಾರಿಸುವ ತಿಂಡತಿನಿಸುಗಳನ್ನು ವಿಧ್ಯಾರ್ಥಿಗಳು ಮನೆಯಲ್ಲಿ ತಯಾರಿಸಿ ತಂದು ಜೊತೆಯಾಗಿ ಸವಿದರು. ವಿದ್ಯಾರ್ಥಿನಿಯರಾದ ಪ್ರೀತಿಕಾ ಮತ್ತು ತಂಡದವರು ಪ್ರಾರ್ಥಿಸಿ, ವಿಶಾಖ್ ಸ್ವಾಗತಿಸಿದರು. ತನ್ವಿ ವಂದಿಸಿದರು. ಅವನಿ, ಇಂಚರ, ನಿಖಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here