ಜೇನು ವ್ಯವಸಾಯಗಾರರ ಸಹಕಾರ ಸಂಘದಿಂದ ವೀರೇಂದ್ರ ಹೆಗ್ಗಡೆಯವರಿಗೆ ಸನ್ಮಾನ

0

ಪುತ್ತೂರು: ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ವತಿಯಿಂದ ಭಾರತ ಸರಕಾರದ ರಾಜ್ಯಸಭಾ ಸದಸ್ಯತ್ವ ಗೌರವ ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳ ಹೆಗ್ಗಡೆ ಬೀಡಿನಲ್ಲಿ ಸನ್ಮಾನಿಸಿದರು.

ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ವೀರೇಂದ್ರ ಹೆಗ್ಗಡೆಯವರನ್ನು ಶಾಲುಹೊದಿಸಿ ಸವಿಜೇನು ನೀಡಿ ಸನ್ಮಾನಿಸಿರು. ಇದೇ ಸಂದರ್ಭದಲ್ಲಿ ಜಯಾನಂದ ಪೆರಾಜೆ ಸಂಪಾದಕತ್ವದ ಮಧುಪ್ರಪಂಚ ತ್ರೈಮಾಸಿಕ ಪ್ರತಿಕೆಯ ಮೂರನೇ ಸಂಚಿಕೆಯನ್ನು ಹೆಗ್ಗಡೆಯವರು ಬಿಡುಗಡೆಗೊಳಿಸಿ ಪತ್ರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ನಿರ್ದೇಶಕರಾದ ಜಿ.ಪಿ.ಶ್ಯಾಂ ಭಟ್, ಡಿ.ತನಿಯಪ್ಪ ನೇರಳೆಕಟ್ಟೆ, ಶಿವಾನಂದ, ವ್ಯವಸ್ತಾಪನಾ ನಿರ್ದೇಶಕ ತಿಮ್ಮಯ್ಯ ಪಿ., ವಿಜಯಕುಮಾರ್ ಪಿ.ಆರ್. ಧರ್ಮಸ್ಥಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here