ಶ್ರೀ ಸರಸ್ವತಿ ಮಹಿಳಾ ಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ :

ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಸೇವಾ ಸಂಘ ಇದರ ಶ್ರೀ ಸರಸ್ವತಿ ಮಹಿಳಾ ಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ವೇ.ಮೂ|ಚಂದ್ರಶೇಖರ ಭಟ್ ಮತ್ತು ಶ್ರೀ ಗೋಪಾಲಕೃಷ್ಣ ಭಟ್ ನೇತೃತ್ವದಲ್ಲಿ ದರ್ಬೆಯ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆಯಿತು .
ಭಜನಾ ಕಾರ್ಯಕ್ರಮ ಮತ್ತು ಶ್ರೀಲಲಿತಾ ಸಹಸ್ರನಾಮ ದೊಂದಿಗೆ ಕುಂಕುಮಾರ್ಚನೆಯನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು .

ಬಳಿಕ ಶ್ರೀ ಸರಸ್ವತಿ ಮಹಿಳಾ ಮಂಡಳಿ ಸದಸ್ಯೆಯರಿಂದ “ಸಂಜಯ ರಾಯಭಾರ”ಮತ್ತು ” ಸಾರಸ್ವತ ಯಕ್ಷಗಾನ ಸಂಘ ” ಸದಸ್ಯರಿಂದ “ಶರಸೇತು ಬಂಧನ ” ಯಕ್ಷಗಾನ ತಾಳಮದ್ದಳೆ ನಡೆಯಿತು .ಹಿಮ್ಮೇಳದಲ್ಲಿ ಶ್ರೀ ಎಸ್ .ಎಲ್ .ಗೋವಿಂದ ನಾಯಕ್ ಪಾಲೆಚ್ಚಾರು ,ಮಾ|ಜ್ಯೋತಿರಾಧಿತ್ಯ ಕೋಡಿಂಬಾಡಿ ,ಮಾ|ಗುರುದೀಪ್ ನಾಟೆಕಲ್ಲು ,ಕು.ಸಂಹಿತಾ ವಿ.ನಾಯಕ್ ಆಜೇರು ಸಹಕರಿಸಿದ್ದರು.ಸಂಘದ ಸದಸ್ಯರೂ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.