ವಿವೇಕಾನಂದ ಶಿಶು ಮಂದಿರದಲ್ಲಿ ಕೃಷ್ಣ ಲೋಕ ಕಾರ್ಯಕ್ರಮ ಸ್ಪರ್ಧೆಗಳು

0

ಪುತ್ತೂರು:ವಿವೇಕಾನಂದ ಶಿಶು ಮಂದಿರದಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ನಡೆಯಲಿರುವ 24ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ‌ ವಿವಿಧ ಸ್ಪರ್ಧೆಗಳು ಆ.6ರಂದು ಶಿಶುಮಂದಿರದಲ್ಲಿ ನಡೆಯಿತು.


ಸ್ಪರ್ಧೆಯನ್ನು ಉದ್ಘಾಟಿಸಿದ ಉದ್ಯಮಿ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ, ಸ್ಪರ್ಧೆಯು ಕಠಿಣವಾಗಿದ್ದು ಪರೀಕ್ಷೆ ಬರೆದ ಹಾಗಿರಬಹುದು. ಆದರೂ ಅದು ಹಿಂದು ಸಂಸ್ಕೃತಿಯ ಭಾಗ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕಷ್ಟವೇನಲ್ಲ. ಹಿಂದು ಸಂಸ್ಕೃತಿಯು ವಿಶಾಲವಾದುದು. ಅದು ಓದಿ ಮುಗಿಯುವಂತದಲ್ಲ. ಮಕ್ಕಳನ್ನು ಸಂಸ್ಕೃತಿಯ ಆಧಾರ ಬೆಳೆಸಿದಾಗ ಉತ್ತಮ ಪ್ರಜೆಗಳಾಗಿ ಮೂಡಿಬರಲು ಸಾಧ್ಯ ಎಂದರು.

ಶಿಶು ಮಂದಿರದ ಅಧ್ಯಕ್ಷ ರಾಜ್ ಗೋಪಾಲ್ ಭಟ್, ಸಂಚಾಲಕ ಅಕ್ಷಯ್ ಕುಮಾರ್, ಶ್ರೀ ಕೃಷ್ಣ ಲೋಕದ ವ್ಯವಸ್ಥಾಪಕ ಅಶೋಕ್ ಕುಂಬ್ಳೆ, ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಕೃಷ್ಣಲೋಕ ಕಾರ್ಯಕ್ರಮದ ಅಧ್ಯಕ್ಷ ಉಪೇಂದ್ರ ಬಲ್ಯಾಯ ಸ್ವಾಗತಿಸಿದರು. ಕಾರ್ಯದರ್ಶಿ ದಾಮೋದರ ಪಾಟಾಳಿ ವಂದಿಸಿದರು. ವೀಣಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.

ಶಂಖನಾದ, ಭಗವದ್ಗೀತೆ ಕಂಠಪಾಠ ಧ್ಯಾನಶ್ಲೋಕ ಸ್ಪರ್ಧೆಗಳು ನಡೆಯಿತು. ಕುಕ್ಕಿಲ‌ ಶ್ರೀಕೃಷ್ಣ ಭಟ್, ನರೇಂದ್ರ ಪ.ಪೂ ಕಾಲೇಜಿನ ಉಪನ್ಯಾಸಕ ವಿಘ್ನೇಶ್ವರ ಭಟ್, ನಗರ ಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಭಾಗ್ಯಲಕ್ಷ್ಮೀ ಅರ್ತಿಕಜೆ, ಸ್ವಪ್ನಾ ಮುಳಿಯ ತೀರ್ಪುಗಾರರಾಗಿ ಸಹಕರಿಸಿದರು

LEAVE A REPLY

Please enter your comment!
Please enter your name here