ಹಿರಿಯ ನ್ಯಾಯವಾದಿ ಅಗರ್ತಬೈಲು ಸದಾಶಿವ ರೈ ನಿಧನ

0

ಪುತ್ತೂರು: ಪುತ್ತೂರಿನಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದ ಹಿರಿಯ ನ್ಯಾಯವಾದಿ ಅಗರ್ತಬೈಲು ಸದಾಶಿವ ರೈ(74ವ) ರವರು ಆ.6 ರಂದು ನಿಧನರಾದರು.

ಪುತ್ತೂರಿನಲ್ಲಿ ಹಲವು ವರ್ಷಗಳಿಂದ ಹಿರಿಯ ನ್ಯಾಯವಾದಿ ರಾಮ್ ಮೋಹನ್ ರಾವ್ ಅವರ ಕಚೇರಿಯಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಅವರು ಪುತ್ತೂರು ವಕೀಲರ ಸಂಘದ ಸಕ್ರೀಯ ಸದಸ್ಯರಾಗಿದ್ದರು. ಇತ್ತೀಚೆಗಷ್ಟೆ ಅವರು ವಕೀಲ ವೃತ್ತಿಯಿಂದ ನಿವೃತ್ತಿ ಪಡೆದಿದ್ದು, ಮನೆಯಲ್ಲೇ ಇದ್ದರು. ಬೆಳಿಯೂರು ಹಿ ಪ್ರಾ ಶಾಲೆಯ ಸಂಚಾಲಕರಾಗಿ, ಪ್ರೌಢಶಾಲೆಯ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಅವರು ವಕೀಲ ವೃತ್ತಿಯಲ್ಲಿ ರೆವೆಣ್ಯುವಿಗೆ ಸಂಬಂಧಿಸಿದ ಕೇಸ್ ಗಳನ್ನು ನಿರ್ವಹಿಸುವಲ್ಲಿ ಚಾಣಾಕ್ಯರಾಗಿದ್ದರು ಎಂದು ಅವರ ಆಪ್ತ ಬಳಗದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here