ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

0

ಪುತ್ತೂರು: ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರಾರ್ಥವಾಗಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಆ.5 ಚಾಲನೆ ದೊರೆತಿದೆ.

ಆ.4ರಂದು ಸಂಜೆ ಸಪ್ತಸತಿ ಪಾರಾಯಣ ನಡೆದು, ಆ.5ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, 12 ತೆಂಗಿನಕಾಯಿ ಗಣಪತಿ ಹೋಮ, ಚಂಡಿಕಾ ಯಾಗ ಪ್ರಾರಂಭ, ಸರ್ಪಸಂಸ್ಕಾರ, ಮಂಗಳಹೋಮ, ಆಶ್ಲೇಷ ಬಲಿ, ಅಷ್ಟವಟು ಆರಾಧನೆ, ಮಧ್ಯಾಹ್ನ ಚಂಡಿಕಾ ಹವನ ಪೂರ್ಣಾಹುತಿ, ಸುವಾಸಿನೀ ಆರಾಧನೆ, ನಾಗದೇವರಿಗೆ ತಂಬಿಲ, ದೈವಗಳಿಗೆ ತಂಬಿಲ, ಸಂಜೆ ಸುದರ್ಶನ ಹೋಮ, ನರಸಿಂಹ ಹೋಮ, ಬಾಧಾಕರ್ಷಣೆ, ಉಚ್ಛಾಟನೆ, ದುರ್ಗಾಪೂಜೆ, ದಂಪತಿ ಆರಾಧನೆ ನಡೆಯಿತು.

ಉಮಾಮಹೇಶ್ವರ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆ, ಉಪಾಧ್ಯಕ್ಷ ಕೆ.ಯಂ ಬೆಳಿಯಪ್ಪ ಗೌಡ ಕೆದ್ಕಾರ್, ಕೋಶಾಧಿಕಾರಿ ನವೀನ್ ಕುಮಾರ್ ರೈ ಶಿಬರ, ಕಾರ್ಯದರ್ಶಿ ಯಂ.ಕೇಶವ ಪೂಜಾರಿ ಮುಕ್ವೆ, ಸದಸ್ಯರಾದ ಸುಜಯ್ ತಂತ್ರಿ ಕೆಮ್ಮಿಂಜೆ, ಪ್ರಸನ್ನ ಭಟ್ ಪಂಚವಟಿ, ಕೆ.ಗಿರೀಶ್ ರೈ ಮಣಿಯ, ಯಂ.ರವಿ ಮಣಿಯ, ಯಂ.ಸುಧೀರ್ ಹೆಬ್ಬಾರ್, ಪದ್ಮನಾಭ ಪೂಜಾರಿ ಬೆದ್ರಾಳ, ಗಣೇಶ್ ಭಟ್ ಮಜಲುಮಾರು, ಗಣೇಶ್ ಶೆಟ್ಟಿ ಶಿಬರ, ಅರ್ಚಕ ಪ್ರಸಾದ್ ಅಡಿಗ, ಸುಧಾಕರ ಕುಲಾಲ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆ.6-ತಿಲಹೋಮ, ಆ.7-ರುದ್ರಯಾಗ

ಕ್ಷೇತ್ರದಲ್ಲಿ ಆ.6ರಂದು ಬೆಳಿಗ್ಗೆ 12 ತೆಂಗಿನಕಾಯಿ ಹೋಮ, ಗಣಪತಿ ಹೋಮ, ತಿಲಹೋಮ, ಕೂಷ್ಮಾಂಡ ಹೋಮ, ಪದನಾಮ ಹೋಮ, ದ್ವಾದಶ ಮೂರ್ತಿ ಆರಾಧನೆ, ಸಾಯುಜ್ಯ ಪೂಜೆ ಸಂಜೆ ಆ ಗಂಟೆಯಿಂದ ಪ್ರಾಸಾದ ಶುದ್ಧಿ, ವಾಸ್ತುಬಲಿ, ರುದ್ರ ಪಾರಾಯಣ ನಡೆಯಲಿದೆ.

ಆ.7ರಂದು 12 ತೆಂಗಿನಕಾಯಿ ಗಣಪತಿ ಹೋಮ, ರುದ್ರಯಾಗ ಪ್ರಾರಂಭ, ಕಲಶಪೂಜೆ, ಮಧ್ಯಾಹ್ನ ರುದ್ರಯಾಗದ ಪೂರ್ಣಾಹುತಿ, ದೇವರಿಗೆ ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here