ವಳತ್ತಡ್ಕ ಮದ್ರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಗುರುತಿನ ಚೀಟಿ ವಿತರಣೆ

0

  • ಸಮವಸ್ತ್ರದ ಮೂಲಕ ಮಕ್ಕಳಲ್ಲಿ ಶಿಸ್ತು ಮೂಡಿಸಲು ಸಾಧ್ಯ-ಸ್ವಾಲಿಹ್ ಕೌಸರಿ

 

 


ಪುತ್ತೂರು: ವಳತ್ತಡ್ಕ ಹಿದಾಯತುಲ್ ಇಸ್ಲಾಂ ಮದ್ರಸದ ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಹಾಗೂ ಐ.ಡಿ ಕಾರ್ಡ್‌ನ್ನು ವಿತರಿಸಲಾಯಿತು. ಮುರ್ಶಿದುಲ್ ಅನಾಮ್ ಯೆಂಗ್‌ಮೆನ್ಸ್, ಪೋಷಕರು ಹಾಗೂ ಜಮಾಅತರು ಸಹಕಾರದಲ್ಲಿ ವಿತರಿಸಲಾಯಿತು.

 


ಮಸೀದಿಯ ಗೌರವಾಧ್ಯಕ್ಷ ಸುಲೈಮಾನ್ ಬಲ್ಲೇರಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಅಹ್ಮದ್ ಸ್ವಾಲಿಹ್ ಕೌಸರಿರವರು ಮಾತನಾಡಿ ಮಕ್ಕಳಲ್ಲಿನ ಮೇಲು-ಕೀಳು ಎನ್ನುವ ಭಾವನೆಯನ್ನು ಹೋಗಲಾಡಿಸಲು ಮತ್ತು ಶಿಸ್ತು ಮೂಡಿಸಲು ಸಮವಸ್ತ್ರದ ಮೂಲಕ ಸಾಧ್ಯವಿದೆ ಎಂದು ಹೇಳಿದರು.

ಜಮಾಅತ್ ಪ್ರ.ಕಾರ್ಯದರ್ಶಿ ಅಬ್ದುಲ್ ರಝಾಕ್ ಬಲ್ಲೇರಿ, ಕೋಶಾಧಿಕಾರಿ ಮಜೀದ್, ಸದಸ್ಯರಾದ ಶರೀಫ್ ಕುಂಜೂರುಪಂಜ, ಪೋಷಕರಾದ ಅಬ್ದುಲ್ ಅಝೀಝ್, ಜಾಫರ್ ಕುಂಜೂರು ಪಂಜ, ಇಕ್ಬಾಲ್, ಇಸ್ಮಾಯಿಲ್, ಅನ್ಸಾರ್, ಸಿನಾನ್ ಇನ್ನಿತರರು ಉಪಸ್ಥಿರಿದ್ದರು. ಪಿ.ಕೆ ಇಬ್ರಾಹಿಂ ಮುಸ್ಲಿಯಾರ್ ಉರುವಾಲುಪದವು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here